ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮತದಾರರಿಂದ ಬಿಜೆಪಿಗೆ ತಕ್ಕ ಪಾಠ: ದಯಾನಂದ

Vishwanath S
Updated On : 5 Apr 2013, 10:56 am

ಕುಂದಗೋಳ: ರಾಜ್ಯದ ಬಿಜೆಪಿಯ ದುರಾಡಳಿತದಿಂದ ಜನತೆ ಬೇಸತಿದ್ದು, ಬಿಜೆಪಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ ಕುಂದೂರ ಹೇಳಿದರು.
ಅವರು ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಬೂತ್‌ಮಟ್ಟದ ಸಭೆ ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ಜೋಗಾರಿ ವಹಿಸಿದ್ದರು. ಅತಿಥಿಯಾಗಿ ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ, ವಿರುಪಾಕ್ಷಗೌಡ ರಂಗನಗೌಡ್ರ, ಶಿವನಗೌಡ ಹಿರೇಗೌಡ್ರ, ರವಿರಾಜ ಭಸ್ತಿ, ಬಾಬು ಹಾಜೇಸಾಭನವರ, ಶ್ರೀಕಾಂತ ರೇವಣಕರ, ಮಂಜುನಾಥ ಕಮ್ಮಾರ ಮತ್ತಿತರರಿದ್ದರು. ರಾಜು ಪಾಟೀಲ ನಿರೂಪಿಸಿದರು. ಮಾಂತೇಶ ಬಂಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement