ರೇಣುಕಾಚಾರ್ಯ ಜಯಂತ್ಯುತ್ಸವ
ಅಣ್ಣಿಗೇರಿ: ಅಖಿಲ ಕರ್ನಾಟಕ ಜಂಗಮಕ್ಷೇಮಾಭಿವೃದ್ಧಿ ಮಹಾಸಭಾ ಅಣ್ಣಿಗೇರಿ ಘಟಕದ ಸಹಯೋಗದಲ್ಲಿ ಸ್ಥಳೀಯ ಪುರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆದಿ ರೇಣುಕಾಚಾರ್ಯರ ಜಯಂತ್ಯುತ್ಸವ ಆಯೋಜಿಸಲಾಗಿತ್ತು. ಆದಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಗೆ ದಾಸೋಹಮಠದ ಶಿವಕುಮಾರ ಶ್ರೀಗಳು ಚಾಲನೆ ನೀಡಿದರು.
ಕುಂಭಹೊತ್ತ ಮಹಿಳೆಯರು, ವಿವಿಧ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಅಡ್ನೂರಿನ ದಾಸೋಹಮಠದ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು ಜಂಗಮ ವಟುಗಳಿಗೆ ಆಯ್ಯಾಚಾರ ಮಂತ್ರೋಪದೇಶ ಬೋಧಿಸಿದರು.
ಜಯಂತ್ಯುತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾದರ ರಾಟಿಮನಿ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಅಡ್ನೂರಿನ ಪಂಚಾಕ್ಷರಿ ಶ್ರೀಗಳು ಆಶೀರ್ವಚನ ನೀಡಿದರು.
ಉಪನ್ಯಾಸಕ ಪ್ರೊ. ಸಿ.ಎಸ್. ಹಿರೇಮಠ, ಕಾಡಯ್ಯ ಹಿರೇಮಠ, ಬಂಗಾರೇಶ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು.
ಬಸನಗೌಡ ಕುರಹಟ್ಟಿ, ಈಶ್ವರಪ್ಪ ಉಳ್ಳಾಗಡ್ಡಿ, ವೀರಭದ್ರಯ್ಯ ಕರವೀರಮಠ, ಸಿ.ಎನ್. ಮುರಗೋಡಮಠ, ಗುರುಸಿದ್ದಯ್ಯ ಕರವೀರಮಠ, ವೀರೇಶ ಹೊಂಬಾಳಿಮಠ, ಶಶಿಕಲಾ ಕಂಬಾಳಿ ಹಿರೇಮಠ, ಜಯಶ್ರೀ ಕೆರಿಮಠ ಉಪಸ್ಥಿತರಿದ್ದರು.
ಮಕ್ಕಳು, ಮಹಿಳೆಯರು, ಸುತ್ತಮುತ್ತಲಿನ ಗ್ರಾಮಗಳ, ಪಟ್ಟಣದ ಜಂಗಮ ಸಮಾಜದ ಬಾಂಧವರು ಇದ್ದರು. ದೀಪಾ ಜೈನರ ಪ್ರಾರ್ಥಿಸಿದರು. ವಿ.ಎಂ. ಹಿರೇಮಠ ಸ್ವಾಗತಿದರು. ವೀರೇಶ ಕುಲಕರ್ಣಿ ಮಹಾಂತೇಶ ವಸ್ತ್ರದ ನಿರೂಪಿಸಿದರು. ವಿಜಯಗಂಗಾ ಹರ್ತಿಮಠ ವಂದಿಸಿದರು.