ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಚಾರ ಸಂಕಿರಣ ಉದ್ಘಾಟನೆ

Vishwanath S
Updated On : 5 Apr 2013, 10:59 am

ಧಾರವಾಡ: ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಆಡ್ಮಿನಿಸ್ಟ್ರೇಷನ್ ಕವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಮೀಡಿಯಾ, ಎಕಾನಾಮಿ ಮತ್ತು ಭಾರತದಲ್ಲಿ ರಾಜಕೀಯ ವ್ಯವಸ್ಥೆ ಕುರಿತಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಪರಿಸರವಾದಿ ಸುರೇಶ ಹೆಬ್ಳೀಕರ ಗುರುವಾರ ಉದ್ಘಾಟಿಸಿದರು. ಇದೇ ಸಂದರ್ಭ ಮಾತನಾಡಿದ ಅವರು, ರಾಜಕೀಯ ಮತ್ತು ಆರ್ಥಿಕ ನೀತಿಗಳ ವಿಫಲತೆಯಿಂದ ಪರಿಸರ ನಾಶವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗುತ್ತಿದ್ದು, ಪರಿಸರ ಸಂರಕ್ಷಣೆಯ ಆವಶ್ಯಕತೆಯಿದೆ ಎಂದರು. ನಂತರ ನಡೆದ ಪ್ರಥಮ ಗೋಷ್ಠಿಯಲ್ಲಿ ಕವಿವಿ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎ.ಎಸ್. ಬಾಲಸುಬ್ರಮಣ್ಯ ಮೀಡಿಯಾ ಮಹತ್ವದ ಕುರಿತಾಗಿ ಮಾತನಾಡಿದರು. 2ನೇ ಗೋಷ್ಠಿಯಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಂ. ಹೊಣಕೇರಿ ಸಮೂಹ ಮಾಧ್ಯಮಗಳ ಸಾಧಕ, ಬಾದಕಗಳ ಕುರಿತು ಮಾತನಾಡಿದರು. ವಿಚಾರಗೋಷ್ಠಿಯಲ್ಲಿ ಕುಲಸಚಿವ ಡಾ.ಜಿ.ಬಿ. ನಂದನ, ಡಾ. ಜಿ.ಸಿ. ಹಿರೇಗೌಡರ, ಡಾ.ಎಂ.ಜಿ. ಖಾನ್, ಡಾ. ಹರೀಶ್ ರಾಮಸ್ವಾಮಿ, ಡಾ.ಎಸ್.ಎಸ್. ಪಟಗುಂದಿ, ಡಾ.ಬಿ.ಎಂ. ರತ್ನಾಕರ, ಡಾ. ಎನ್.ಎಂ. ಸಾಲಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

ವಿವಿಧ ಸ್ಥಾನಗಳಿಗೆಅಭ್ಯರ್ಥಿಗಳ ನೇಮಕ
ಧಾರವಾಡ:
ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಸ್ಥಾನಗಳಿಗೆ ಸಮಿತಿ ತಾಲೂಕು ಅಧ್ಯಕ್ಷ ರವಿ ಲೋಲಿ ಗುರುವಾರ ಅಭ್ಯರ್ಥಿಗಳನ್ನು ನೇಮಕಗೊಳಿಸಿದ್ದಾರೆ. ಸಮಿತಿಯ ತಾಲೂಕು ಕಾರ್ಯದರ್ಶಿಯಾಗಿ ವಿಕಾಸ ಮೋಟಿ, ಇಲ್ಲಿನ ವಾರ್ಡ್ ನಂ. 19ರ ಅಧ್ಯಕ್ಷರಾಗಿ ಉಮೇಶ ಪಾಟೀಲ, ತಾಲೂಕಿನ ಸಹ ಕಾರ್ಯದರ್ಶಿಯಾಗಿ ಅವಿನಾಶ ಢವಳೆ ನೇಮಕಗೊಂಡಿದ್ದಾರೆ.

ಮಮತಾ ಬ್ಯಾನರ್ಜಿರಾಜಿನಾಮೆಗೆ ಒತ್ತಾಯ
ಧಾರವಾಡ:
ಎಸ್‌ಎಫ್‌ಐ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಭಾರತ ವಿದ್ಯಾರ್ಥಿ ಫೆಡರೇಶನ್ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳು ಪ್ರಜಾಸತ್ತಾತ್ಮಕ ಹಕ್ಕುಗಳ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಲಾಠಿ ಚಾರ್ಜ್ ಮಾಡಿಸಲಾಗಿದ್ದು, ಆಗ ರಾಜ್ಯ ಸಮಿತಿ ಮುಖಂಡ ಗುಪ್ತಾ ಮೃತರಾಗಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕ್ಷಣ ರಾಜಿನಾಮೆ ನೀಡಬೇಕು. ಹತ್ಯೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಮಾರುತಿ ಅಂಬಿಗೇರ, ಸಂದೀಪ ಕೋಳೂರಿಗಿ, ಬಾಳು ಗುಂಡಗೋಳ, ಈರಪ್ಪಾ, ಸಂಜೀವ ಇದ್ದರು.

ಕೆಜೆಪಿಗೆ ಹನುಮಂತ ನೇಮಕ
ಕಲಘಟಗಿ:
ಕರ್ನಾಟಕ ಜನತಾ ಪಕ್ಷದ ಕಲಘಟಗಿ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಚಾಪುರ ಗ್ರಾಮದ ಹನುಮಂತ ಯಲ್ಲಪ್ಪ ಚವರಗುಡ್ಡ ಇವರನ್ನು ಜಿಲ್ಲಾ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ನೇಮಕ ಮಾಡಿದ್ದಾರೆ.

ಲಕ್ಷ್ಮಮ್ಮ ವಾಗ್ಮೋಡೆ ನಿಧನ
ಕಲಘಟಗಿ:
ಪಟ್ಟಣದ ಶತಾಯುಷಿ ಲಕ್ಷ್ಮಮ್ಮ ಮಾಯಪ್ಪ ವಾಗ್ಮೋಡೆ (101) ಗುರುವಾರ ನಿಧನರಾದರು. ಮೃತರಿಗೆ ಓರ್ವ ಪುತ್ರಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement