ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಶ್ರಮಿಸಿ: ಪಾಟೀಲ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ಸದಸ್ಯರು ಶ್ರಮಿಸಬೇಕು ಎಂದು ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ ಸಲಹೆ ನೀಡಿದರು.
ಇಲ್ಲಿನ ಬೈರಿದೇವರಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಗರಾಭಿವೃದ್ಧಿಗಾಗಿ ನಿರ್ಮಿಸಿರುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಅವಳಿ ನಗರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡುವ ಭರವಸೆ ನೀಡಿದರು.
ಪಾಲಿಕೆ ಸದಸ್ಯರಾದ ಡಾ. ಪಾಂಡುರಂಗ ಪಾಟೀಲ, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಹೊರಕೇರಿ, ಸುಧಾ ಮಣಿಕುಂಟ್ಲ ಅವರನ್ನು ಮಲ್ಲನಗೌಡ ಬಡಾವಣೆ ನಾಗರಿಕರು ಇದೇ ಸಂದರ್ಭ ಸನ್ಮಾನಿಸಿದರು. ದೇವರಾಜ ಮಣಿಕುಂಟ್ಲ, ಲಾಲಸಾಬ ಇಮಾರತವಾಲೇ, ಶಂಕರಗೌಡ ಪಾಟೀಲ, ಶಬ್ಬೀರ ಲಿಂಬುವಾಲೇ, ಅಕ್ಬರ ಬೆಳಗಾವಕರ ಮತ್ತಿತರರು ಹಾಜರಿದ್ದರು.