ಎಸ್ಸೆಸ್ಸೆಲ್ಸಿ: 25 ಸಾವಿರ ವಿದ್ಯಾರ್ಥಿಗಳು
ಧಾರವಾಡ: ಎಸ್ಎಸ್ಎಲ್ಸಿ ದ್ವಿತೀಯ ಭಾಷೆ ಪರೀಕ್ಷೆ ಶುಕ್ರವಾರ ಸುಸೂತ್ರವಾಗಿ ನಡೆಯಿತು. ಒಟ್ಟು 26,700 ವಿದ್ಯಾರ್ಥಿಗಳ ಪೈಕಿ 25,652 ವಿದ್ಯಾರ್ಥಿಗಳು ಹಾಜರಾಗಿದ್ದು, ಯಾರೂ ಡಿಬಾರ್ ಆಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ ತಿಳಿಸಿದ್ದಾರೆ.