ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: 11ರಿಂದ 'ಮಕ್ಕಳ ಫನ್‌'

Vishwanath S
Updated On : 6 Apr 2013, 12:05 pm

ಧಾರವಾಡ: ಕಲಾನಿಧಿ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯಿಂದ ಡಯಟ್ ಆವರಣದಲ್ಲಿ ಏ. 11ರಿಂದ ಮೇ 5ರ ವರೆಗೆ ಮಕ್ಕಳ ಬೇಸಿಗೆ ವಿಶೇಷ ಶಿಬಿರ 'ಮಕ್ಕಳ ಫನ್‌' ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮಕ್ಕಳ ಸಂವಾದ, ಜಾನಪದ ಸೊಗಡಿನ ವಿವಿಧ ಕಲೆಗಳ ತರಬೇತಿ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ನೃತ್ಯ, ಸಂಗೀತ ತರಬೇತಿ ಮೊದಲಾದವುಗಳನ್ನು ಏರ್ಪಡಿಸಲಾಗಿದೆ. ಸಾಧನಕೇರಿ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಹಾಗೂ ಮಕ್ಕಳ ಮನೋರಂಜನೆಯ ಆಟಗಳ ಮಜಾದ ಜೊತೆಗೆ ಪರಿಸರ ವೀಕ್ಷಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ  94808 67763 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement