ಎಲ್ಲ ಕ್ಷೇತ್ರಗಳಲ್ಲಿ ನ್ಯಾಯಾಂಗ ಪ್ರವೇಶ ಒಳಿತಲ್ಲ: ದೇಶಪಾಂಡೆ
ಧಾರವಾಡ: ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಬಹುರಾಷ್ಟ್ರೀಯ ಔಷಧ ಕಂಪನಿಯಾದ ನೋವಾರ್ಟಿಸ್ ಕ್ಯಾನ್ಸರ್ ಔಷಧಿಯ ಹಕ್ಕು ಸ್ವಾಮ್ಯದ ಕುರಿತು ಹೂಡಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಭಾರತೀಯ ಜನತೆಗೆ ಸಿಕ್ಕಿರುವ ಬಹಳ ದೊಡ್ಡ ಗೆಲವು ಎಂದು ಹೇಳಬಹುದು. ಜನಸಾಮಾನ್ಯರ ಜೀವನಕ್ಕೆ ಸಂಬಂಧಪಟ್ಟ ಎಲ್ಲ ಮಹತ್ವದ ವಿಷಯಗಳಲ್ಲಿ ನ್ಯಾಯಾಂಗವೇ ನಿರ್ಣಯ ನೀಡುವಂತಾಗಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹಿರಿಯ ಕಾರ್ಮಿಕ ನಾಯಕ ಎಂ.ಕೆ. ದೇಶಪಾಂಡೆ ಹೇಳಿದರು.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ, ಸಂಪಿಗೆ ಲೋಕ ಶಿಕ್ಷಣ ಉಪನ್ಯಾಸ ಮಾಲೆಯಡಿ ಒಂಭತ್ತನೆಯ ವಿಶೇಷ ಉಪನ್ಯಾಸ ಕ್ಯಾನ್ಸರ್ ರೋಗಿ ಮತ್ತು ಸೆಕ್ಷನ್ 3ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು.
ಸೆಕ್ಷನ 3ಡಿ ಕುರಿತು ಕವಿವಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಎಸ್. ಪಾಟೀಲ ಮಾತನಾಡಿದರು.
ಶಿಕ್ಷಣ ಮಂಟಪದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಂಕರ ಕುಂಬಿ, ಗುರು ಹಿರೇಮಠ, ಬಿ.ಎನ್. ಪೂಜಾರಿ ಎಂ.ಎಂ. ಖಾನ್, ಶಾರದಾ ಗೋಪಾಲ ಮತ್ತಿತರರಿದ್ದರು.