ಕಥನಗೀತೆ ಹಾಡುವವರೇ ಜೋಗಿ ಕಲಾವಿದರು
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 7
ರಾಮಾಯಣ ಮಹಾಭಾರತದಂತಹ ಕಥನ ಗೀತೆಗಳನ್ನು ನಿರಾಳವಾಗಿ ಹಾಡುವ ಮೂಲಕ ನಮ್ಮೆದುರಿಗೆ ಹಲವಾರು ಪ್ರಸಂಗಗಳನ್ನು ರೋಚಕವಾಗಿ ತಂದು ನಿಲ್ಲಿಸುವ ಮಹತ್ವಪೂರ್ಣ ಕಲಾವಿದರೇ ಜೋಗಿ ಕಲಾವಿದರು ಎಂದು ಕರ್ನಾಟಕ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಶಾಲಿನಿ ರಘುನಾಥ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಜಾನಪದ ಮಂಟಪವು ಹಮ್ಮಿಕೊಂಡಿದ್ದ ಆನಂದಪ್ಪ ಬಿ.ಎಚ್. ಅವರ ಕಿನ್ನರಜೋಗಿ ಕಥನಗೀತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ, ಶಿರಸಿ, ಬನವಾಸಿ, ಶಿವಮೊಗ್ಗ, ಬಳ್ಳಾರಿ ಹೀಗೆ ನಾಡಿನತುಂಬ ಸಂಚರಿಸಿ ವಿಶಿಷ್ಠ ಧಾರ್ಮಿಕ ಮತ್ತು ಸಾಮಾಜಿಕ ಕಥನ ಗೀತೆ ಹಾಡಿ ಸಮಾಜವನ್ನು ಉನ್ನತ ಮಾರ್ಗದಲ್ಲಿ ಮುನ್ನಡೆಸಿದ ಕೀರ್ತಿ ಜೋಗಿ ಕಲಾವಿದರಿಗೆ ಸಲ್ಲುತ್ತದೆ.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಮಹೇಶ ಹೊರಕೇರಿ ಮಾತನಾಡಿದರು. ಜಾನಪದ ಮಂಟಪದ ಸಂಚಾಲಕ ಶಂಕರ ಕುಂಬಿ, ಡಾ. ರಾಮು ಮೂಲಗಿ, ಶಶಿಧರ ಪಾಟೀಲ, ಡಾ.ಎಂ.ಎಂ. ಕಲಬುರ್ಗಿ, ಜಿ.ಬಿ. ಹೊಂಬಳ, ಪ್ರಭು ಹಂಚಿನಾಳ ನಿರ್ಮಲಾ ಪಾಟೀಲ ಇದ್ದರು.