ಗರಗದಲ್ಲಿ ಅಷ್ಟಗಿ ಮತ ಯಾಚನೆ
ಧಾರವಾಡ: ವಿಧಾನಸಭಾ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ತವನಪ್ಪ ಅಷ್ಟಗಿ ಅಮ್ಮಿನಭಾವಿ, ನೀರಲಕಟ್ಟಿ, ಗರಗ ಮತ್ತು ಕೋಟೂರು ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.
ಇದೇ ಸಂದರ್ಭದಲ್ಲಿ ಗರಗ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಯಲ್ಲಿ ತಮಗೆ ಮತ ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂದರ್ಭ ಮುಖಂಡರಾದ ಶಿವನಿಂಗ ಕಾಶಿಗಾರ, ಮಡಿವಾಳಪ್ಪ ಚಂಚಿ, ಚಿದಂಬರ ದೇಶಪಾಂಡೆ, ಪವನ ದೇಶಪಾಂಡೆ ಇದ್ದರು.