ರಂಗ-ರಂಗಿನಾಟ ಆರಂಭ
ಧಾರವಾಡ: ಸಮುದಾಯ ಘಟಕದಿಂದ ಏ. 6ರಿಂದ 26ರ ವರೆಗೆ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ರಂಗ-ರಂಗಿನಾಟವೆಂಬ ಮಕ್ಕಳ ವಿಶೇಷ ಬೇಸಿಗೆ ಶಿಬಿರ ನೀನಾಸಂ ಪದವೀಧರ ಲಕ್ಷ್ಮಣ ಪೀರಗಾರ ನಿರ್ದೇಶನದಲ್ಲಿ ಹಮ್ಮಿಕೊಳ್ಳಲಾಗಿದೆ. ವ್ಯಕ್ತಿತ್ವ ವಿಕಸನ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯಗಳನ್ನು ಬೆಳೆಸುವುದು, ಮನರಂಜನೆ ಆಟಗಳು, ಗೊಂಬೆ ತಯಾರಿಕೆ, ಪೇಪರ ಕಟಿಂಗ್, ಚಿತ್ರಕಲೆ ಸೇರಿದಂತೆ ವಿವಿಧ ಕಲೆಗಳನ್ನು ಕಲಿಸಲಾಗುವುದು. ಮಾಹಿತಿಗೆ ಬಿ.ಐ. ಈಳಿಗೇರ- 93431 04226 ಸಂಪರ್ಕಿಸಿ.
ಮಕ್ಕಳ ಬೇಸಿಗೆ ತರಬೇತಿ
ಧಾರವಾಡ: ಇಲ್ಲಿನ ರೈಜಿಂಗ್ ಸ್ಟಾರ್ ಕಲಾ ಸಂಸ್ಥೆಯಿಂದ ಏ. 6ರಿಂದ 30 ದಿನಗಳವರೆಗೆ ಮಕ್ಕಳ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿದೆ. 5, 6, ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ನೃತ್ಯ, ಸಂಗೀತ, ಚಿತ್ರಕಲೆ, ಸಮರ ಕಲೆ, ಅಭಿನಯ, ಗೊಂಬೆಯಾಟ, ಕ್ರಾಫ್ಟ್, ಯೋಗ ಹಾಗೂ ಸಾಹಸ ತರಬೇತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ- 77953 26095 ಸಂಪರ್ಕಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.