ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧರ್ಮ, ಸಂಸ್ಕೃತಿ ಸಂರಕ್ಷಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ

Vishwanath S
Updated On : 9 Apr 2013, 11:06 am

ಧಾರವಾಡ: ವೀರಶೈವ ಧರ್ಮ ಸರ್ವ ಸಮುದಾಯಗಳ ಸಂಗಮವಾಗಿದ್ದು, ಈ ವಿಶ್ವ ಧರ್ಮಕ್ಕೆ ಬಲ ತುಂಬುವ ಮತ್ತು ವೀರಶೈವ ಒಳಪಂಗಡಗಳಲ್ಲಿ ಐಕ್ಯತೆ ತರಬಲ್ಲ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ಮುಂಡರಗಿಯ ಜಗದ್ಗುರು ಅನ್ನದಾನ ಶ್ರೀಗಳು ಕರೆ ನೀಡಿದರು.
ಧಾರವಾಡ ವೀರಶೈವ ಸಂಸ್ಥೆ ಇಲ್ಲಿನ ಕಲ್ಯಾಣನಗರ ಸಿದ್ಧರಾಮೇಶ್ವರ ಮಾರ್ಗದರ್ಶಿಯಲ್ಲಿ ಏರ್ಪಡಿಸಿದ್ದ ವಿವಿಧ ಗಣ್ಯರ ಸನ್ಮಾನ ಹಾಗೂ ವಿಶೇಷ ಉಪನ್ಯಾಸದ ಶತಕ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಂಗಮರು ಇಂದು ಆಧುನಿಕ ಸಮಾಜದ ಪ್ರಭಾವಕ್ಕೆ ಒಳಪಟ್ಟು ಅನೇಕ ಸ್ಥಿತ್ಯಂತರಗಳಿಗೆ ಒಗ್ಗಿದ್ದಾರೆ. ಅವರೀಗ ಸಮಾಜದ ಸಂರಕ್ಷಣೆಗೆ ಸನ್ನದ್ಧರಾಗಬೇಕೆಂದು ತಿಳಿಸಿದರು. ಡಾ.ಸಂಗಮೇಶ ಸವದತ್ತಿಮಠ, ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ ಆಶಯ ಮಾತುಗಳನ್ನಾಡಿದರು.
ಅನ್ನದಾನ ಶ್ರೀಗಳು, ಡಾ. ಕೆ.ಸಿ. ಹಿರೇಮಠ, ಪಾಲಿಕೆ ಸದಸ್ಯ ಶಿವು ಹಿರೇಮಠ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಹುಬ್ಬಳ್ಳಿಯ ಎಂ.ಎನ್. ಹಿರೇಮಠ, ಉದ್ಯಮಿ, ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರನ್ನು ಸನ್ಮಾನಿಸಲಾಯಿತು. ಎಸ್.ಎಂ. ವಿಶ್ವಾರಯ್ಯ, ಪ್ರೊ.ಎಸ್.ಎಸ್. ಬೀಳಗಿ, ಡಾ. ಮಹಾಂತಸ್ವಾಮಿ, ಜಿ.ಆರ್. ಹಿರೇಮಠ, ಎಸ್.ಎಂ. ಹೊಸಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement