ಹುಬ್ಬಳ್ಳಿ: ಮನೆ ಕೀಲಿ ಮುರಿದು ಹಣ ದೋಚಿದ ಕಳ್ಳರು
ಹುಬ್ಬಳ್ಳಿ: ನಾಲ್ಕು ಮನೆಗಳ ಕೀಲಿ ಮುರಿದ ಕಳ್ಳರು, 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹಳೇಹುಬ್ಬಳ್ಳಿ ಅರವಿಂದ ನಗರದ ಜನತಾ ಪ್ಲಾಟ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ. ಹನುಮಂತ ಇಟಗಿ ಎಂಬುವವರ ಮನೆಯಲ್ಲಿ ಸುಮಾರು 40 ಸಾವಿರ ನಗದು ಹಾಗೂ 5 ತೊಲೆ ಚಿನ್ನಾಭರಣ, ಗಣಪತಸಾ ಶಾಲಗಾರ ಮನೆಯಲ್ಲಿ 20 ಸಾವಿರ ನಗದು ಹಾಗೂ ಒಂದೂವರೆ ತೊಲೆ ಚಿನ್ನಾಭರಣ, ದೇವಪ್ಪ ಚಲವಾದಿ ಎಂಬುವವರ ಮನೆಯಲ್ಲಿ 21 ಸಾವಿರ ನಗದು ಹಾಗೂ ಪಕ್ಕದ ಮತ್ತೊಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಅಕ್ಕಪಕ್ಕದ ಮನೆಗಳಲ್ಲಿನವರು ಮನೆಗೆ ಬೀಗ ಜಡಿದು ಪರಸ್ಥಳಕ್ಕೆ ತೆರಳಿದ್ದನ್ನು ಗಮನಿಸಿದ ಕಳ್ಳರು, ಮನೆಗಳ ಬೀಗ ಮುರಿದು ಒಳನುಗ್ಗಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.