ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ನಾಳೆ ಕುದರಿ ಮಾಸ್ತರ ಕೃತಿ ಬಿಡುಗಡೆ

Lingaraj Badiger
Updated On : 13 Apr 2013, 11:38 am

ಧಾರವಾಡ: ಯುವ ಲೇಖಕ ಟಿ.ಎಸ್. ಗೊರವರ ಅವರ ಕಥಾ ಸಂಕಲನ 'ಕುದರಿ ಮಾಸ್ತರ' ಬಿಡುಗಡೆ ಮತ್ತು ಕಥಾಗೋಷ್ಠಿ ಏ. 14ರ ಬೆಳಗ್ಗೆ 10.30ಕ್ಕೆ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ. ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಕಥಾ ಸಂಕಲನ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದು, ಚನ್ನಪಟ್ಟಣದ ಪಲ್ಲವ ವೆಂಕಟೇಶ ಭಾಗವಹಿಸುತ್ತಾರೆ. ನಂತರ ನಡೆಯುವ ಕಥಾಗೋಷ್ಠಿಯಲ್ಲಿ ಸುನಂದಾ ಪ್ರಕಾಶ ಕಡಮೆ, ಡಾ೤ ಬಸು ಬೇವಿನಗಿಡದ, ವಿ.ಆರ್. ಕಾರ್ಪೆಂಟರ್, ಡಾ೤ ವಿನಯಾ, ಮಹಾಂತೇಶ ನವಲಕಲ್, ಮುದಿರಾಜು ಬಾಣದ ಸ್ವರಚಿತ ಕಥಾ ವಾಚನ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement