ನೀತಿ ಸಂಹಿತೆ ಉಲ್ಲಂಘನೆ: ಸಾಮಗ್ರಿ ವಶ
ಹುಬ್ಬಳ್ಳಿ: ಇಲ್ಲಿನ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತ ಸುನೀಲ ಡಿಸೋಜಾ ಎಂಬುವವರ ಜನ್ಮದಿನಾಚರಣೆ ಪಾರ್ಟಿ ಮೇಲೆ ದಾಳಿ ಮಾಡಿದ ಚುನಾವಣಾ ವೀಕ್ಷಕರ ತಂಡ ಪಾರ್ಟಿಯಲ್ಲಿ ಬಳಸಲಾಗುತ್ತಿದ್ದ ಹಲವಾರು ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.
ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ನ ಎಸ್.ಎನ್. ಗಣಾಚಾರಿ ನೇತೃತ್ವದ ತಂಡ ಪಾರ್ಟಿ ನಡೆಯುತ್ತಿದ್ದ ವೇಳೆ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ರಾಜಕೀಯ ಭಾಷಣ ಮಾಡಲಾಗಿತ್ತು. ಅಲ್ಲದೇ, ಪಾರ್ಟಿ ಕುರಿತು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ ಎಂದು ದಾಳಿ ವೇಳೆ ತಿಳಿದುಬಂದಿದೆ.
ಚುನಾವಣಾ ಆಯೋಗದ ಪ್ಲೈಯಿಂಗ್ ಸ್ಕ್ವಾಡ್ನ ದಾಳಿಯಲ್ಲಿ ನಾನ್ನೂರು ಕುರ್ಚಿ, ಶಾಮಿಯಾನಾ ಮತ್ತು ಡೈನಿಂಗ್ ಟೆಬಲ್ ವಶಪಡಿಸಿಕೊಂಡಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಖುರ್ಚಿಗಳನ್ನು ಕೇಶ್ವಾಪುರ ಠಾಣೆಗೆ ಸಾಗಿಸಲಾಗಿದೆ.