ರತ್ನಶ್ರೀ ಪ್ರಶಸ್ತಿ ಪಡೆದವರಿಗೆ ಸನ್ಮಾನ
ಧಾರವಾಡ: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ಸಿಎಸ್ಐ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಿ.ವಿ. ಕೊಕ್ಕಳಕಿ ಹಾಗೂ ಕಾಲೇಜಿನ ಕಚೇರಿ ಮುಖ್ಯಸ್ಥ ಸದಾನಂದ ದಂಡಿನ ಅವರಿಗೆ ಕರ್ನಾಟಕ ರತ್ನಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕಾಲೇಜಿನ ವಾರ್ಷಿಕ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಲೇಜಿನ ಶಿಕ್ಷಕ ಸಂಘದ ಅಧ್ಯಕ್ಷ ಡಾ.ಎನ್.ಬಿ. ಸಂಗಾಪೂರ ಹಾಗೂ ಸಿಎಸ್ಐ ಕಾಲೇಜಿನ ಪಾಚಾರ್ಯರು ಈ ಇಬ್ಬರು ಪ್ರಶಸ್ತಿ ಪಡೆದವರನ್ನು ಸನ್ಮಾನಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷ ಪ್ರೊ.ಸಿ.ಎಚ್. ಪಾಟೀಲ, ದೈಹಿಕ ನಿರ್ದೇಶಕ ಬಿ.ಸಿ. ಸಕ್ಕರಿ ಇದ್ದರು.