ಅಭ್ಯರ್ಥಿಗಳ ಲೆಕ್ಕಪತ್ರ ಪರಿಶೀಲಿಸಿ: ಕುಮಾರ್
ಕಲಘಟಗಿ: ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಲೆಕ್ಕಪತ್ರ ತಂಡಗಳ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚವನ್ನು ಪರಿಶೀಲನೆ ಜೊತೆಗೆ ನಿಗಾವಹಿಸಬೇಕು ಎಂದು ಕಲಘಟಗಿ ವಿಧಾನಸಭಾ ಮತ ಕ್ಷೇತ್ರದ ಲೆಕ್ಕಪತ್ರಗಳ ತಂಡದ ಅಧಿಕಾರಿ ಕುಮಾರ ಅಮರೇಂದ್ರ ನಾರಾಯಣ ಹೇಳಿದರು. ಶುಕ್ರವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿ, ಲೆಕ್ಕಪತ್ರ ನಿರ್ವಹಣೆ ದಾಖಲೆಗಳನ್ನು ತಲುಪಿಸುವುದನ್ನು ನಿಗದಿತ ವೇಳೆಯಲ್ಲಿ ಮಾಡಬೇಕೆಂದು ವಿವರಿಸಿದ ಅವರು, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ತಕ್ಷಣ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣಾಧಿಕಾರಿ ಡಾ. ವಿಜಯಕುಮಾರ ಹೊನಕೇರಿ, ತಹಸೀಲ್ದಾರ್ ಕೆ.ಆರ್. ಕುಲಕರ್ಣಿ, ಪಿಎಸ್‌ಐ ಶಿವಾನಂದ ಗಾಣಿಗೇರ, ಎಚ್.ಎನ್. ವಡ್ಡರ, ಎಫ್.ಎಸ್. ಅಣ್ಣಿಗೇರಿ, ಪಿ.ಎ. ಕನವಳ್ಳಿ, ಅಬಕಾರಿ ಉಪವೀಕ್ಷಕರು, ಮೋಟಾರು ವಾಹನ ನಿರೀಕ್ಷಕರು ಇದ್ದರು.