ಏಕತೆಗೆ ಅಡಿಪಾಯ ಹಾಕಿದ ಅಂಬೇಡ್ಕರ್
ಧಾರವಾಡ: ಜಿಲ್ಲಾಡಳಿತ, ಜಿಪಂ ಜಂಟಿಯಾಗಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 122ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಡಿಸಿ ಸಮೀರ್ ಶುಕ್ಲ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಸಂವಿಧಾನ ರೂಪಿಸುವ ಮೂಲಕ ದೇಶದ ಏಕತೆ, ಭಾವೈಕ್ಯತೆಗೆ ಉತ್ತಮ ಅಡಿಪಾಯ ಹಾಕಿದ್ದರು. ಇದರಿಂದಾಗಿ ದೇಶ ಸ್ವಂತತ್ರವಾದಾಗ ಜಾತಿಭೇದಗಳಿಂದ ಒಡೆಯುತ್ತದೆ ಎಂಬ ಬ್ರಿಟಿಷರ ನಂಬಿಕೆ ಸುಳ್ಳಾಗಿದ್ದು ಇತಿಹಾಸ ಎಂದರು.
ಪ್ರಕಾಶ ಮಲ್ಲಿಗವಾಡ ತಂಡ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ ಸಾರುವ ಗೀತೆಗಳ ಗಾಯನ, ಚೆನ್ನಬಸಪ್ಪ ಮಳಗಿ ಸಂಗಡಗರು ಕ್ರಾಂತಿಗೀತೆಗಳು ಹಾಡಿದರು. ನೃತ್ಯ, ಕಲಾ ಸಂಸ್ಕೃತಿಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಪ್ರಭು ಹಂಚಿನಾಳ ನಿರ್ದೇಶಿತ ಡಾ. ಅಂಬೇಡ್ಕರ್ ಜೀವನ ಕಥೆಯಾಧಾರಿತ ರೂಪಕವನ್ನು ಕಲಾ ಸಂಗಮ ಸಂಸ್ಥೆಯ ಕಲಾವಿದರು ಪ್ರದರ್ಶಿಸಿದರು. ಪಿ.ಎ. ಮೇಘಣ್ಣವರ, ಬಿ.ಎ. ಪದ್ಮನಯನ, ಡಾ.ವೈ.ಎಸ್. ರವಿಕುಮಾರ್, ಅಶೋಕ ಚಲವಾದಿ, ವಿಜಯಾ ಬೆಂಗಳೂರು, ವೈ.ಎ. ನಾಗಮ್ಮನವರ ಇದ್ದರು.