ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕ್ಷೇತ್ರವನ್ನು ಹಸಿರಾಗಿಸುವೆ: ನಿಂಬಣ್ಣವರ್

Lingaraj Badiger
Updated On : 15 Apr 2013, 12:18 pm

ಕಲಘಟಗಿ: ಕ್ಷೇತ್ರವನ್ನು ಸಮಗ್ರ ನೀರಾವರಿಗೆ ಒಳಪಡಿಸಿ ರೈತರ ಬಾಳನ್ನು ಹಸನಾಗಿಸುವ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿ ಸಂಪೂರ್ಣ ಹಸಿರನ್ನಾಗಿಸುವ ತಮ್ಮ ಪ್ರಯತ್ನಕ್ಕೆ ಮತದಾರರು ಆಶೀರ್ವದಿಸಬೇಕು ಎಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಮನವಿ ಮಾಡಿದರು.
ಅವರು ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿ, ಈಚೆಗೆ ಗ್ರಾಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿರುವುದಲ್ಲದೆ, ಸಭೆಗಳನ್ನು ನಡೆಸಿ ತಮಗೆ ಮತ ನೀಡುವುದರೊಂದಿಗೆ ರೈತಪರ ನೀಲುವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲ ಪಡಿಸಬೇಕೆಂದು ವಿನಂತಿಸಿದರು.
ಅಶೋಕ ಗುಮ್ಮಗೋಳ, ನಾಗಪ್ಪ ಕಲ್ಲೂರ, ಬಸಯ್ಯ ಹಿರೇಮಠ ಮಾನಪ್ಪ ಬಾನವಾನವರ, ಡಾ. ಓಂಕಾರ, ಬಸಪ್ಪ ಭಜಂತ್ರಿ, ಸಾಧಿಕ್ ಹೆಬ್ಬಾಳ, ಡಾ. ರೆಡ್ಡಿ, ಗೀತಾ ಮರಲಿಂಗಣ್ಣವರ, ಶಕುಂತಲಾ ನಾಡಗೌಡ, ಮಲ್ಲೇಶ ಜಾವೂರ, ಯಲ್ಲಾರಿ ಶಿಂಧೆ, ಶೇಖಪ್ಪ ಹುಲಗೂರ, ಚಂದ್ರಗೌಡ ಪಾಟೀಲ, ಪರಶುರಾಮ ರಜಪೂತ, ಸದಾನಂದ ಚಿಂತಾಮಣಿ, ಗಣಪತಿ ಮೋತೆನವರ, ಎಸ್.ಟಿ. ತೆಗ್ಗಿಹಳ್ಳಿ ಇತರರು ಇದ್ದರು.

ಅಷ್ಟಗಿ ಬಿರುಸಿನ ಪ್ರಚಾರ
ಧಾರವಾಡ: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ತವನಪ್ಪ ಅಷ್ಟಗಿ ನಗರದ ವಾರ್ಡ್ ನಂ. 4 ಮತ್ತು 5ರಲ್ಲಿ ಭಾನುವಾರ ಪಾದಯಾತ್ರೆ ನಡೆಸಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ವಾರ್ಡ್‌ನ ವಿವಿಧ ಕಾಲನಿಗಳಲ್ಲಿ ಮನೆ ಮನೆಗೆ ತೆರಳಿ ಅಷ್ಟಗಿ ಮತ ಯಾಚಿಸಿದರು. ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹಲವಾರು ಭರವಸೆಗಳನ್ನು ನೀಡುತ್ತಾ ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಬೇಕು ಮತದಾರರನ್ನು ಮನವಿ ಮಾಡಿಕೊಂಡರು. ವಿನೋದ ಕುಸುಗಲ್ಲ, ಶಿವಾನಂದ ಹಂಜಿ, ರಮೇಶ ಹೂಗಾರ, ವೀರೇಶ ಮದ್ನೂರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement