ಕಲಘಟಗಿ: ಜೆಡಿಎಸ್ ಸೇರ್ಪಡೆ
ಕಲಘಟಗಿ: ಪಟ್ಟಣದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ತಾಲೂಕು ಜೆಡಿಎಸ್ ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ತಾಲೂಕು ಜೆಡಿಎಸ್ ಅಧ್ಯಕ್ಷ ಶಂಕರಗಿರಿ ಬಾವನವರ, ನಗರ ಘಟಕ ಅಧ್ಯಕ್ಷ ವೃಶಬೇಂದ್ರ ಪಟ್ಟಣಶೆಟ್ಟಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಮಲ್ಲಯ್ಯ ಗುಡಿಮನಿ, ಜಗನ್ನಾಥ ಸಿದ್ದನಗೌಡರ ಸಮ್ಮುಖದಲ್ಲಿ ಪಟ್ಟಣದ ಗಂಗಾಧರ ಎಸ್. ಫರಾಂಡೆಕರ, ಮೌಲಾಸಾಬ ಬಮ್ಮಿಗಟ್ಟಿ, ವಿಠ್ಠಲ ಮೀರಜಕರ, ವಿ.ಎ. ಭಜಂತ್ರಿ, ಎಂ.ಜಿ. ಮೀರಜಕರ, ವಿ.ವಿ. ಬನುಖಂಡೆ, ರಮೇಶ ಬಡಂಕರ, ಸುಭಾಶ ಮಂಡಲಕರ, ಕಾಶೀನಾಥ ಬಡಂಕರ ಮುಂತಾದವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದರು.
ಎಸ್.ಎನ್. ರಾಯನಾಳ, ಉಳವಪ್ಪ ಬಿದರಳ್ಳಿ, ಯಲ್ಲಪ್ಪ ಧರೆಣ್ಣವರ, ಪುಟ್ಟು ಉಪಾಧ್ಯಾಯ, ಬಾಬು ಅಂಚಟಗೇರಿ, ಮಂಜುನಾಥ ಮಾಳಗಿ ಮುಂತಾದವರು ಉಪಸ್ಥಿತರಿದ್ದರು.