ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವೀರ ಮಾರುತಿ ರಥೋತ್ಸವ

Lingaraj Badiger
Updated On : 16 Apr 2013, 12:06 pm

ಧಾರವಾಡ: ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಇಲ್ಲಿನ ಬಾರಾಕೊಟ್ರಿ ರಸ್ತೆಯಲ್ಲಿರುವ ವೀರ ಮಾರುತಿ ದೇವರ 27ನೇ ವರ್ಷದ ರಥೋತ್ಸವ ಗುರುವಾರ (ಯುಗಾದಿ ಪಾಡ್ಯ) ವಿಜೃಂಭಣೆಯಿಂದ ಜರುಗಿತು. ಗುರುವಾರ ಬೆಳಗ್ಗೆ ರಥ ಹಾಗೂ ದೇವಸ್ಥಾನ ಸಿಂಗರಿಸಲಾಗಿತ್ತು. ವೀರ ಮಾರುತಿಗೆ ಎಲೆ ಪೂಜೆ, ಬೆಣ್ಣೆ ಪೂಜೆ ಸಲ್ಲಿಸಲಾಯಿತು. ಅನಂತರ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಬಾರಾಕೊಟ್ರಿ, ಸದಾಶಿವನಗರ, ಜಯನಗರ, ಶಿವಗಿರಿ, ಕಲ್ಯಾಣನಗರ, ಸ್ಟೇಟ್ ಬ್ಯಾಂಕ್ ಕಾಲನಿ, ರಾಘವೇಂದ್ರ ನಗರದ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಡೊಳ್ಳು, ಜಾಂಜ್ ಮುಂತಾದ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಧಾರವಾಡ: ಹುಬ್ಬಳ್ಳಿ ಬಂಜಾರ ಕಾಲನಿಯಲ್ಲಿ 2003-04ರ ಸಾಲಿನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ 332 ಮನೆಗಳ ಸರ್ವೇ ಮಾಡಿ, ಅಕ್ರಮವಾಗಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಹೊರ ಹಾಕಬೇಕೆಂದು ಅಲ್ಲಿನ ನಿವಾಸಿಗಳು ಶುಕ್ರವಾರ ಒತ್ತಾಯಿಸಿದ್ದಾರೆ. ಅಕ್ರಮವಾಗಿ ವಾಸವಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಮೂಲ ಫಲಾನುಭವಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪಾಂಡುರಂಗ ಪಮ್ಮಾರ ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಡಿಸಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement