ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಧಾರವಾಡ: ನಾಮಪತ್ರ ಸಲ್ಲಿಕೆಗೆ ಏ. 17ರ ಬುಧವಾರ ಕೊನೆ ದಿನವಿದ್ದು, ಮಂಗಳವಾರ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 24 ಜನ ಅಭ್ಯರ್ಥಿಗಳು 27 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬಿಎಸ್ಪಿ 1, ಭಾರತೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಮೂರು, ಬಿಎಸ್ಸಾರ್ ಕಾಂಗ್ರೆಸ್ ಎರಡು, ಲೋಕಸತ್ಯ, ಕನ್ನಡ ಮಕ್ಕಳ ಪಕ್ಷ ತಲಾ ಒಂದು ಮತ್ತು 15 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನವಲಗುಂದ ಕ್ಷೇತ್ರಕ್ಕೆ ಶಂಭುಲಿಂಗ ಚಂದ್ರಶೇಖರ ಶಿದ್ರಾಮ ಶೆಟ್ಟರ ಬಿಎಸ್ಸಾರ್‌ನಿಂದ, ವಿರೂಪಾಕ್ಷಗೌಡ ಶಿವನಗೌಡ ಕುಲಕರ್ಣಿ ಹಾಗೂ ಬಸವಣ್ಣೆವ್ವ ಯಲ್ಲಪ್ಪ ಕದ್ರೊಳ್ಳಿ ಪಕ್ಷೇತರರು. ಕುಂದಗೋಳ ಕ್ಷೇತ್ರಕ್ಕೆ ಕಿರಣ ಫಕ್ಕೀರಪ್ಪ ಶೆಟ್ಟೆಪ್ಪನವರ ಮತ್ತು ಜೈಲಾನಿ ಮಹಬೂಬಸಾಬ ಗೋಕಾಕ ಪಕ್ಷೇತರು. ಧಾರವಾಡ ಕ್ಷೇತ್ರಕ್ಕೆ ರಾಜಶೇಖರಯ್ಯಾ ವಿರೂಪಾಕ್ಷಯ್ಯ ಕಂಟಿಮಠ ಹಾಗೂ ಸೋಮಪ್ಪ ಬಸಪ್ಪ ಬೆನಕಟ್ಟಿ ಪಕ್ಷೇತರರು. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ನಿಂಗಪ್ಪ ಪೀರಪ್ಪ ಮರಗಾನೂರ ಬಿಎಸ್‌ಪಿ, ಪ್ರಸಾದ ಅಬ್ಬಯ್ಯ ಕಾಂಗ್ರೆಸ್, ಚನ್ನಪ್ಪ ಭೀಮಪ್ಪ ಮಲ್ಲಿಗವಾಡ ಆರ್‌ಪಿಐ, ಹುಬ್ಬಳ್ಳಿ-ಧಾರವಾಡ ಕೇಂದ್ರ ಶಮ್ಸ್ ತಬ್ರೇಜ್ ಖಾಸಿಮಸಾಬ ಸಂಸಿ-ಜೆಡಿಎಸ್, ಸೈಯ್ಯದ ಮಹಬೂಬಸಾಬ ತೋರಗಲ್ಲ, ವಿನೋದ ಯಲ್ಲಪ್ಪ ಪವಾರ, ನಾರಾಯಣ ಮದಸೂದನ ಬೆಂಗೇರಿ ಹಾಗೂ ಶ್ರೀಕಾಂತ ನಾರಾಯಣಸಾ ಕಬಾಡಿ-ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು, ಹುಬ್ಬಳ್ಳಿ-ಧಾರವಾಡ ಪಶ್ಚಿಮಕ್ಕೆ ಹಳ್ಳೆರಾಯ ತಂದೆ ಗುರುನಾಥ ರೆಡ್ಡಿ ದೇಸಾಯಿ-ಎಸ್‌ಯುಸಿಐ, ಶಿವಾಜಿರಾವ್ ರಾಮಚಂದ್ರ ರಾವ್ ಮೋರೆ-ಕಾಂಗ್ರೆಸ್, ನಾಗರಾಜ ಶಂಕರರಾವ್ ತಿಗಡಿ ಲೋಕಸತ್ಯ, ಕುಮಾರದೇಸಾಯಿ ದ್ಯಾಮನಗೌಡ ರಾಯನಗೌಡ, ಚನಬಸಪ್ಪ ಶಿವಬಸಪ್ಪ ಕುಸುಗಲ್, ಈಶ್ವರ ಮಲ್ಲಪ್ಪ ಸಾಣಿಕೊಪ್ಪ ಹಾಗೂ ಅನಿತಾ ಕುಮಾರ ಹೊರಡಿ-ಪಕ್ಷೇತರರು ಹಾಗೂ ಕಲಘಟಗಿ ಕ್ಷೇತ್ರಕ್ಕೆ ಪರ್ವತಗೌಡ ಚನ್ನವೀರನಗೌಡ ಸಿದ್ದನಗೌಡ-ಜೆಡಿಎಸ್, ಹುಸೇನಸಾಬ ಮಹಬೂಬಸಾಬ ತೋರಗಲ್ಲ-ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.