ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತಬ್ರೇಜ್ ಕೋಟಿ ರು. ಒಡೆಯ

Lingaraj Badiger
Updated On : 17 Apr 2013, 12:57 pm

ಹುಬ್ಬಳ್ಳಿ:  ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ ಕೋಟ್ಯಾಧಿಪತಿ. ನವಿಮುಂಬೈನಲ್ಲಿ ಒಂದು ವಾಸದ ಮನೆ ಸೇರಿದಂತೆ ಅವರ ಪತ್ನಿಯ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಎರಡು ಮನೆಗಳಿದ್ದು, ಒಟ್ಟು ನಾಲ್ಕು ಮನೆಗಳು ತಬ್ರೇಜ್ ಅವರ ಮಾಲೀಕತ್ವದಲ್ಲಿವೆ.
ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಬ್ರೇಜ್ ಅವರು ರು. 33 ಕೋಟಿಗೂ ಹೆಚ್ಚು ಸ್ಥಿರಾಸ್ತಿ ಇದ್ದು, ಪತ್ನಿ ನಾಜಿರಾಶಮ್ಸ್ ತಬ್ರೇಜ್ ಅವರ ಹೆಸರಿನಲ್ಲಿ ರು. 3.03 ಕೋಟಿ. ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ವೃತ್ತಿಯಿಂದ ಉದ್ಯಮಿಯಾಗಿರುವ ತಬ್ರೇಜ್ ಅವರು ತಮ್ಮ ಹಾಗೂ ಪತ್ನಿ ನಾಜಿರಾ ಕೈಯಲ್ಲಿ ಒಟ್ಟು ರು. 5.49 ಲಕ್ಷ ನಗದು ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿ ರು. 1.64 ಲಕ್ಷ ಠೇವಣಿ ಇದ್ದು, ತಮ್ಮ ಹೆಸರಿನಲ್ಲಿ ರು. 3 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳು ಮತ್ತು ಪತ್ನಿಯ ಹೆಸರಿನಲ್ಲಿ ಒಟ್ಟು ವಿವಿಧ ಮೊತ್ತದ ರು. 14 ಲಕ್ಷ ಮೌಲ್ಯದ ಪಾಲಿಸಿಗಳಿವೆ. ರು. 5 ಲಕ್ಷ ಮೌಲ್ಯದ ಒಂದು ಪಂಟೊ ಕಾರು, ರು. 5.64 ಲಕ್ಷ ಮೌಲ್ಯದ ಸುಜುಕಿ ರಿಜ್ ಕಾರು ಇದೆ. ರು. 2.80 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, ನನ್ನ ಹೆಸರಿನಲ್ಲಿ ಮತ್ತು ರು. 7 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಇದೆ. ರು. 1.55 ಕೋಟಿ ಚರಾಸ್ತಿ ನನ್ನ ಹೆಸರಿನಲ್ಲಿ ಮತ್ತು ಪತ್ನಿ ನಾಜಿರಾ ಹೆಸರಿನಲ್ಲಿ ರು. 22.54 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಪ್ರಮಾಣಿಕರಿಸಿದ್ದಾರೆ.
ವಿಮಾನ ನಿಲ್ದಾಣದ ಎದುರು ಇರುವ 1.70 ಲಕ್ಷ ಚದರ ಅಡಿ ಜಾಗದ ಸದ್ಯದ ಮಾರುಕಟ್ಟೆ ಮೌಲ್ಯ ರು. 30 ಕೋಟಿ ಗಳಾಗಿದ್ದು ಅದು ನನ್ನ ಹೆಸರಿನಲ್ಲಿದೆ. ಪತ್ನಿಯ ಹೆಸರಿನಲ್ಲಿ ರು. 2.82 ಕೋಟಿ ಮೌಲ್ಯದ ಕೃಷಿಯೇತರ ಜಮೀನಿದೆ.
ಹುಬ್ಬಳ್ಳಿಯ ಶ್ರೀಕಂಠಸಾ ವಿಠಲಸಾ ಬಡ್ಡಿ ಅವರಿಗೆ ಕೊಡಬೇಕಿರುವ ರು. 1.25 ಕೋಟಿ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಸಾಲದ ಮೊತ್ತ ರು. 1.56,16,613 ಇದ್ದು, ಪತ್ನಿಯ ಹೆಸರಿನಲ್ಲಿ ರು. 15,55,785 ಲಕ್ಷ ಸಾಲವಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement