ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸೆಂಟ್ರಲ್‌ಗೆ ಯಮಧರ್ಮನೂ ಅಭ್ಯರ್ಥಿ!

Lingaraj Badiger
Updated On : 18 Apr 2013, 11:45 am

ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಶೆಟ್ಟರ್ ಸ್ಪರ್ಧೆಗೆ ಇಳಿದಿರುವ ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವ ಹಲವಾರು ಅಭ್ಯರ್ಥಿಗಳು ವಿವಿಧ ವೇಷಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದರು.
ಯಮಧರ್ಮನ ವೇಷದಲ್ಲಿ: ಯಮಧರ್ಮನ ವೇಷದಲ್ಲಿ ಆಗಮಿಸಿದ್ದ ನಿವೃತ್ತ ಮಹಾನಗರ ಪಾಲಿಕೆ ನೌಕರ, ರಂಗಭೂಮಿ ಕಲಾವಿದ ಎಸ್.ಆರ್. ಕಂಪ್ಲಿ, ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದ್ದಿಷ್ಟು, ನನಗೆ ರಾಜಕಾರಣಿ ಆಗಬೇಕು ಎನ್ನುವ ಆಸೆ ಇಲ್ಲ. ಜನರಲ್ಲಿ ನನಗೆ ಮತ ಹಾಕಿ ಎಂದು ಕೇಳುವುದಿಲ್ಲ. ಒಳ್ಳೆಯವರು ಯಾರಿದ್ದಾರೋ ಅವರಿಗೆ ಮತ ಹಾಕಿ ಎಂದು ಕೇಳಿಕೊಳ್ಳುತ್ತೇನೆ ಎಂದರು.  ಪಕ್ಷೇತರ ಅಭ್ಯರ್ಥಿಯಾಗಿ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕೆ ಹುಬ್ಬಳ್ಳಿ ಹೊಸೂರನ ಶಿವಾನಂದ ಬೆಲ್ಲದ ಅವರು ತಮ್ಮ ಬೆಂಬಲಿಗ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಚನ್ನಬಸಪ್ಪ ಅಂಗಡಿ ಅವರಿಗೆ ಮಹಾತ್ಮಾ ಗಾಂಧಿ ವೇಷ ಹಾಕಿಸಿದ್ದರು. ಹೊಸೂರಿನ ನಿವೃತ್ತ ಪೊಲೀಸ್ ಹವಾಲ್ದಾರ್ ಬಸಪ್ಪ ಕುಗಾಟಿ ಅವರು ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್ ಅವರ ವೇಷ ಧರಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement