ದರ್ಪಣ್ ಜೈನ್ಗೆ ಪ್ರಧಾನಮಂತ್ರಿ ಪ್ರಶಸ್ತಿ
ಧಾರವಾಡ: ಧಾರವಾಡ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಹಾಗೂ ಪ್ರಸ್ತುತ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಿರ್ದೇಶಕರಾಗಿರುವ ದರ್ಪಣ್ ಜೈನ್ ಅವರು ಪ್ರಧಾನ ಮಂತ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2008ರಿಂದ 2012ರ ವರೆಗೆ ಧಾರವಾಡ ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಗುರುಕುಲ, ಬಾರೋ ಸಾಧನಕೇರಿಗೆ ಉದ್ಯಾನವನ, ಕೆಲಗೇರಿ ಕೆರೆ, ಗ್ಲ್ಯಾಸ್ ಹೌಸ್, ಉಣಕಲ್ ಕೆರೆ, ನೃಪತುಂಗ ಬೆಟ್ಟ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಕಾರಣ ಅವರಿಗೆ ಪ್ರಧಾನಮಂತ್ರಿ ಪ್ರಶಸ್ತಿ ಲಭಿಸಿದೆ. ಏ.21ರಂದು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.