ಕಾಂಗ್ರೆಸ್ ಸೇರಿದ ನೂರಾರು ಯುವಕರು
ನವಲಗುಂದ: ವಿವಿಧ ಪಕ್ಷದ ನೂರಾರು ಯುವಕರು ಕಾಂಗ್ರೆಸ್ ಸೇರುತ್ತಿರುವುದರಿಂದ ಪಕ್ಷಕ್ಕೆ ಆನೆಯ ಬಲ ಬಂದಂತಾಗಿದೆ ಎಂದು ಮಾಜಿ ಸಚಿವ ಕೆ.ಎನ್. ಗಡ್ಡಿ ಹೇಳಿದರು.
ಬುಧವಾರ ಗಾಂಧಿ ಮಾರ್ಕೆಟ್ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ಪಕ್ಷದ ಕಾರ್ಯಕರ್ತ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವಿ.ಡಿ. ಅಂದಾನಿಗೌಡರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಸಿ. ರೇಣುಕಮಠ, ಎಚ್.ವಿ. ಮಾಡೊಳ್ಳಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಆರ್.ಎಚ್. ಕೋನರಡ್ಡಿ, ಧುರೀಣ ಸುರೇಶ ನಿಡವಣಿ, ಎಂ.ಎಸ್. ಕರಿ, ಮಂಜು ಜಾಧವ, ಎನ್.ವೈ. ಹೊಂಗಲ, ನಿಂಗಪ್ಪ ಅಸುಂಡಿ, ಉಸ್ಮಾನ ಬಬರ್ಚಿ, ಶಿವಾಜಿ ಕಲಾಲ ಮತ್ತಿತರರು ಇದ್ದರು.