ಬೆನ್ನುಹುರಿ ಶಸ್ತ್ರಚಿಕಿತ್ಸಾ ಪ್ರಾತ್ಯಕ್ಷಿಕೆ ಕಾರ್ಯಾಗಾರ
ಹುಬ್ಬಳ್ಳಿ: ಇಲ್ಲಿನ ಹೊಸೂರು ಕೆಎಸ್ಆರ್ಟಿಸಿ ಡಿಪೋ ಪಕ್ಕದಲ್ಲಿರುವ ಶ್ರೀ ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸಾಯಿನ್ಸ್ ಮತ್ತು ಟ್ರೋಮಾ ಸೆಂಟರ್ನಲ್ಲಿ ಏ. 21ರಂದು ಬೆನ್ನುಹುರಿ ಶಸ್ತ್ರ ಚಿಕಿತ್ಸೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಆಸ್ಪತ್ರೆಯ ಚೇರಮನ್ನರು ಆಗಿರುವ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಬೆನ್ನುಹುರಿ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ಆಗಿರುವ ಅತ್ಯಾಧುನಿಕ ಅವಿಷ್ಕಾರಗಳ ಬಗ್ಗೆ ಅಂತಾರಾಷ್ಟ್ರೀಯ ಖ್ಯಾತಿಯ ಪುಣೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ ಡಾ. ಸುಶೀಲ ಪಾಠಕರ ವಿವರಿಸಲಿದ್ದಾರೆ ಎಂದಿದ್ದಾರೆ.
ಕಾರ್ಯಾಗಾರದ ಮುಖ್ಯ ಉದ್ದೇಶ ಬೆನ್ನುಹುರಿ ಶಸ್ತ್ರ ಚಿಕಿತ್ಸೆಯಲ್ಲಿ ಅನುಸರಿಸಬೇಕಾದ ವಿಧಾನಗಳು ಹಾಗೂ ಇಂತಹ ಶಸ್ತ್ರ ಚಿಕಿತ್ಸೆಯಲ್ಲಿ ಯಾವುದೆ ರೀತಿಯ ವ್ಯತಿರಿಕ್ತ ಪರಿಣಾಮ ರೋಗಿಯ ಮೇಲೆ ಆಗದಂತೆ ನೋಡಿಕೊಳ್ಳುವುದಾಗಿದೆ ಎಂದು ಡಾ. ಕ್ರಾಂತಿಕಿರಣ ತಿಳಿಸಿದ್ದಾರೆ.
ಕ್ಲಿಷ್ಟಕರ ಬೆನ್ನುಹುರಿ ಶಸ್ತ್ರ ಚಿಕಿತ್ಸೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಡಾ. ಪಾಠಕರ, ಬಾಲಾಜಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅಲ್ಲದೇ ವೃತ್ತಿನಿರತ ಹಾಗೂ ಸ್ನಾತಕೋತ್ತರ ವಿದ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದೂ ಡಾ. ಕ್ರಾಂತಿಕಿರಣ ವಿವರಿಸಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, 9.30 ರಿಂದ 12.30, 1 ಗಂಟೆಯಿಂದ 3.30 ಹಾಗೂ 3.30 ರಿಂದ 5 ಗಂಟೆಯವರೆಗೆ ಬೆನ್ನುಹುರಿ ಶಸ್ತ್ರಚಿಕಿತ್ಸೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಲಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಡಾ. ಕ್ರಾಂತಿಕಿರಣ ಮೊ. 9343425497, ಡಾ. ವಿರೇಂದ್ರ ಭಸ್ಮೆ ಮೊ. 9448981375 ಹಾಗೂ ಡಾ. ಸಂದೀಪ ಎಸ್. ಈಶನವರ ಮೊ. 984574811ಗೆ ಸಂಪರ್ಕಿಸುವಂತೆ ಆಸ್ಪತ್ರೆ ಪ್ರಕರಣೆ ತಿಳಿಸಿದೆ.