ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬೇಲೂರಿನಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ

Rashmi Kasaragodu
Updated On : 20 Apr 2013, 11:03 am

ಧಾರವಾಡ: ಇಲ್ಲಿನ ಬೇಲೂರು ಕೈಗಾರಿಕೆ ಪ್ರದೇಶದ ಆಪೆಕ್ಸ್ ಆಟೋ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಕೈಗಾರಿಕಾ ಮತದಾರರ ಜಾಗೃತಿ ಸ್ವೀಪ್ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಆಡಳಿತ ಅಧಿಕಾರಿ ಸಿಬ್ಬಂದಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದ ರು.
  ಧಾರವಾಡ ತಾಲೂಕು ಸ್ವೀಪ್ ನೊಡಲ್ ಅಧಿಕಾರಿ ಅಪ್ಪಣ್ಣರವರು ಮಾತನಾಡಿ, ಮತದಾನದಲ್ಲಿ ತಪ್ಪದೇ ಭಾಗವಹಿಸುವುದರ ಬಗ್ಗೆ ಮಾಹಿತಿ ನೀಡಿದರು. ಕೈಗಾರಿಕಾ ಸಹಾಯಕ ನಿರ್ದೇಶಕರಾದ ರಮೇಶ ಬಂಕಾಪುರ ಮತದಾನದಲ್ಲಿ ಭಾಗವಹಿಸುವುದರಿಂದ ದೇಶದ ಹಾಗೂ ರಾಜ್ಯದ ಅಭಿವೃದ್ಧಿಗೆ ನೆರವು ನೀಡಿದಂತೆ ಆಗುವುದೆಂದು ತಿಳಿಸಿದರು. ಅಧ್ಯಕ್ಷತೆಯನ್ನು ಶಿರಿಷ್ ಉಪ್ಪಿನ ವಹಿಸಿದ್ದರು. ಕೈಗಾರಿಕೆ ಸಹಾಯಕ ನಿರ್ದೇಶಕ ಮೋಹನ ಬರಮಕ್ಕನವರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement