ಜಿಲ್ಲೆಗೆ ಕಮಲ ಪಡೆ
ಹುಬ್ಬಳ್ಳಿ: ಚುನಾವಣೆ ಪ್ರಚಾರದ ಅಂಗವಾಗಿ ಬಿಜೆಪಿ ರಾಷ್ಟ್ರೀಯ ನಾಯಕರಾದ ಲಾಲಕೃಷ್ಣ ಆಡ್ವಾಣಿ ಸೇರಿದಂತೆ ವಿವಿಧ ನಾಯಕರು ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಲಾಲಕೃಷ್ಣ ಆಡ್ವಾಣಿ ಏ.21ರಂದು ಮಧ್ಯಾಹ್ನ್ನ 1.30ಕ್ಕೆ ಹುಬ್ಬಳ್ಳಿಗೆ ಆಗಮಿಸಿ 3ಕ್ಕೆ ರಸ್ತೆ ಮೂಲಕ ರಾಣಿಬೆನ್ನ್ನೂರ ಹಾಗೂ ದಾವಣಗೆರೆಗೆ ತೆರಳಿ ಪ್ರಚಾರ ಕೈಗೊಂಡು ಹುಬ್ಬಳ್ಳಿಗೆ ಆಗಮಿಸಿ ರಾತ್ರಿ 9ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳುವರು. ಅದೇ ದಿನ ವೆಂಕಯ್ಯ ನಾಯ್ಡು ಅವರು ಸಂಜೆ 6ಕ್ಕೆ ಹುಬ್ಬಳ್ಳಿಯ ಪ್ರಕಾಶ ಕಾಲೋನಿ ಹತ್ತಿರ ಜನತಾ ಕಾಲೋನಿಯ ಸಮುದಾಯ ಭವನದ ಮೈದಾನದಲ್ಲಿ ಹು-ಧಾ ಸೆಂಟ್ರಲ್ ಹಾಗೂ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳುವರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕುಂದಗೋಳದಲ್ಲಿ ಪ್ರಚಾರ ಕೈಗೊಳ್ಳುವರು ಮತ್ತು ಚಿತ್ರ ನಟಿ ತಾರಾ ಬೆಳಗ್ಗೆ 11ಕ್ಕೆ ಧಾರವಾಡ ವಿಧಾನಸಭಾ ಕ್ಷೇತ್ರದ ನರೇಂದ್ರ ಹಾಗೂ 12ಕ್ಕೆ ತೇಗೂರನಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ನಂತರ 1.30ಕ್ಕೆ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ನವಲೂರಿನಲ್ಲಿ 4ಕ್ಕೆ ಉಣಕಲ್ ಗ್ರಾಮದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಸಂಜೆ 6ಕ್ಕೆ ತಬೀಬ್ ಲ್ಯಾಂಡ್ನ ಕೆ.ಇ.ಬಿ ಹತ್ತಿರ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು.
ಇಂದು ಅಹವಾಲು ಸ್ವೀಕಾರ
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ವೀಕ್ಷಕ ಡಾ. ದೇವೆಂಧ್ರನಾಥ ನವಲಗುಂದ ಲೋಕೋಪಯೋಗಿ ವಸತಿ ಗೃಹದಲ್ಲಿ ಏ. 21ರಿಂದ ಬೆಳಗ್ಗೆ 11ರಿಂದ 12ರ ವರೆಗೆ ಅಹವಾಲುಗಳನ್ನು ಸ್ವೀಕರಿಸಲು ಲಭ್ಯವಿರುತ್ತಾರೆ.