ಶಿಲ್ಪಾ ಶೆಟ್ಟರ್ ಬಿರುಸಿನ ಪ್ರಚಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 20
ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. 47ರ ವ್ಯಾಪ್ತಿಯಲ್ಲಿ ಶನಿವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪರ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡ ಶಿಲ್ಪಾ ಶೆಟ್ಟರ್ ಅವರು ದೇಶಪಾಂಡೆ ನಗರ, ಗಾಂಧಿವಾಡಾ ಮತ್ತು ರಾಮನಗರ, ಕೇಶ್ವಾಪುರದ ವಿವಿಧ ಅಪಾರ್ಟಮೆಂಟ್ಗಳಲ್ಲಿ ಮತ್ತು ರೈಲ್ವೆ ಕ್ವಾರ್ಟರ್ಸ್ನ ಮತದಾರರಲ್ಲಿ ಅವಳಿ ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ವಿನಂತಿಸಿದರು.
ವಾರ್ಡ್ ನಂ. 47ರ ಬಿಜೆಪಿ ಸದಸ್ಯೆ ಸ್ಮಿತಾ ಜಾಧವ ಅವರನ್ನು ಒಳಗೊಂಡ ಬಿಜೆಪಿ ಮಹಿಳಾ ಪ್ರಚಾರ ತಂಡ ಒಟ್ಟು ನಾಲ್ಕು ತಂಡಗಳಲ್ಲಿ ಇಡೀ ವಾರ್ಡ್ನಲ್ಲಿ ಪಾದಯಾತ್ರೆ ಕೈಗೊಂಡು ಬಿಜೆಪಿ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಮಾಹಿತಿ ಇರುವ ಕರಪತ್ರ ನೀಡಿ, ಈ ಬಾರಿ ಕೂಡ ಆಶೀರ್ವದಿಸಿ ಎಂದು ಮತದಾರರಲ್ಲಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಸ್ಮಿತಾ ಜಾಧವ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ವಂಟಮೂರಿ, ಸ್ನೇಹಾ ಶೆಟ್ಟರ್, ಶೋಭಾ ಶೆಟ್ಟರ್, ಮೇನಕಾ ಹುರಳಿ, ನಂದಾ ಸವಡಿ, ನಂದಿನಿ ಬಂಕಾಪುರ, ಜಯಶ್ರಿ ನಿಂಬರಗಿ ಇನ್ನಿತರರು ಇದ್ದರು. ಏ. 21ರಂದು ರಮೇಶ ಭವನ ಹಾಗೂ ಬೆಂಗೇರಿ ಮತ್ತು 22ರಂದು ಉಣಕಲ್, ಸಾಯಿನಗರ, ಜ್ಯೋತಿ ಕಾಲೋನಿ ಸೇರಿದಂತೆ ವಾರ್ಡ್ ನಂ. 27ರಲ್ಲಿ ಪತಿ ಜಗದೀಶ ಶೆಟ್ಟರ್ ಪರವಾಗಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.