ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ಥಿರವಾದ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲಿಸಿ

Rashmi Kasaragodu
Updated On : 21 Apr 2013, 12:08 pm

 ಹುಬ್ಬಳ್ಳಿ: ಜಾತ್ಯತೀತ ತತ್ವಗಳನ್ನು ಹೊಂದಿರುವ ಕಾಂಗ್ರೆಸ್‌ನಿಂದ ಮಾತ್ರ ದೇಶದ ಐಕ್ಯತೆ ಸಾಧ್ಯ. ಸ್ಥಿರ ಆಡಳಿತ ನೀಡುವ ಕಾಂಗ್ರೆಸ್‌ಗೆ ಈ ಬಾರಿ ಮತದಾರರು ಆಶೀರ್ವದಿಸಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಹೇಳಿದರು.
ಶನಿವಾರ, ವಾರ್ಡ್ ನಂ. 20ರ ಸಿಮೇಂಟ್ ಚಾಳ, ಕನ್ಯಾ ನಗರ, ಡೌನ್ ಚಾಳ, ವಾಚಮನ್ ಚಾಳ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಮತ ಯಾಚಿಸಿದರು. ಅಲ್ಪಸಂಖ್ಯಾತರು ಮತ್ತು ದಲಿತರು ವಾಸಿಸುವ ಪ್ರದೇಶಗಳಲ್ಲಿ ಮೂಲ ಸೌಕರ್ಯದ ಕೊರತೆ ಕಾಣುತ್ತಿದ್ದು, ತಾವು ಆಯ್ಕೆಯಾದರೆ ಈ ಸಮುದಾಯದ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.  ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿದ ಎಐಸಿಸಿ ವೀಕ್ಷಕ ಹುಸೇನ್ ದಳವಾಯಿ, ಈ ಕ್ಷೇತ್ರದ ಎಲ್ಲ ಸಮಾಜದ ಮತದಾರರು ಪ್ರಸಾದ್ ಅಬ್ಬಯ್ಯ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದರು.  ಈ ಸಂದರ್ಭದಲ್ಲಿ ಅನ್ವರ್ ಮುಧೋಳ, ಶಫಿ ಮುದ್ದೇಬಿಹಾಳ, ಯೂಸುಫ್ ಬಳ್ಳಾರಿ, ಮಹೇಂದ್ರ ಸಿಂಘಿ, ಯಮನೂರ ಗುಡಿಹಾಳ, ಮೋಹನ ಹಿರೇಮನಿ, ಗಣೇಶ ದೊಡಮನಿ, ವಿಜಯ ಗುಂಟ್ರಾಳ, ರಾಜು ಗಾಣದಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement