ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ: ತಬ್ರೇಜ್ ಶಂಸಿ

Rashmi Kasaragodu
Updated On : 21 Apr 2013, 12:08 pm

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ ಅವರು ಶನಿವಾರ ತಮ್ಮ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಶನಿವಾರ ಬೆಳಗ್ಗೆ ಶಿರಡಿ ನಗರ, ವಿದ್ಯಾನಗರದ ದೇವಿನಗರ ರಾಜನಗರ, ವಿದ್ಯಾನಗರ, ದೇವಿನಗರ, ಕುಮಾರವ್ಯಾಸ ನಗರ ಮುಂತಾದ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು ಮತ ಯಾಚಿಸಿದರು.  ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ದಲಿತರ ಕೇರಿಗಳ ಅಭಿವೃದ್ಧಿ, ದಲಿತ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ.
ಹು-ಧಾ ಅವಳಿ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ಶಾಸಕನಾಗಿ ಆಯ್ಕೆಯಾದರೆ ಅವಳಿ ನಗರದ ಮೂಲಸೌಕರ್ಯಗಳ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ ಅವರೊಂದಿಗೆ ಇರ್ಫಾಣ್ ಸಮ್ನಿ, ಎಚ್.ಐ ಚಾವೂಸ್, ನಾಝೀರಾ ಶಂಸಿ, ತಸ್ಲೀಮ್ ಶಂಸಿ, ವಿನೀತಾ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement