ಎಂ.ಆರ್. ಪಾಟೀಲ ಪ್ರಚಾರ
ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ ಅವರು, ಅರಳಿಕಟ್ಟಿ, ಕರಡಿಕೊಪ್ಪ, ರಾಮಾಪೂರ, ಶರೇವಾಡ ಬಮ್ಮಸಮುದ್ರ, ಕಟ್ನೂರ ಗಿರಿಯಾಲ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಮಹೇಶಗೌಡ ಪಾಟೀಲ, ಕ್ಷೇತ್ರದಲ್ಲಿ ಪಕ್ಷದ ಪರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಭ್ಯರ್ಥಿ ಗೆಲುವಿಗೆ ಪಣತೊಟ್ಟಿದ್ದಾರೆ. ದೇಶದಲ್ಲಿನ ಉಗ್ರರ ದಮನಕ್ಕೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ ಎಂದರು. ಇದೇ ವೇಳೆ ವಿವಿಧ ಪಕ್ಷಗಳ 40 ಯುವಕರು ಹಾಗೂ ಹೊಸದಾಗಿ ಮತದಾನದ ಹಕ್ಕು ಪಡೆದ 50ಕ್ಕೂ ಹೆಚ್ಚು ಯುವಕರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಜಿಪಂ ಸದಸ್ಯ ಟಿ.ಜಿ. ಬಾಲಣ್ಣವರ, ಮುಖಂಡರಾದ ಬಸನಗೌಡ ಶಿವನಗೌಡ್ರ, ಈರಣ್ಣ ಜಡಿ, ಗೌರಮ್ಮ ಹರಿಜನ, ವಿರುಪಾಕ್ಷಗೌಡ ಪಾಟೀಲ, ವೀರಭದ್ರಯ್ಯ ರಾಚನಗೌಡ್ರ, ನೇಮಿಚಂದ್ರ ಬಸಾಪೂರ ಎಂ.ಡಿ. ನಾಗರಳ್ಳಿ ಸಂದರ್ಭದಲ್ಲಿದ್ದರು.
ಸಿಎಂ: ಮಂಗಳವಾರ ನಗರಕ್ಕೆ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಲಿದ್ದು, ಎಂ.ಆರ್. ಪಾಟೀಲ ಪರ ಪ್ರಚಾರ ನಡೆಸುವರು.