ಶಿಲ್ಪಾ ಶೆಟ್ಟರ್ ಮತಯಾಚನೆ
ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಜಗದೀಶ ಶೆಟ್ಟರ್ ದಾಖಲೆ ಅಂತರದಿಂದ ಗೆಲವು ಸಾಧಿಸಲಿದ್ದಾರೆಂದು ಶಿಲ್ಪಾ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಹು-ಧಾ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಜಗದೀಶ ಶೆಟ್ಟರ್ ಪರ ಚುನಾವಣಾ ಪಾದಯಾತ್ರೆ ಕೈಗೊಂಡಿರುವ ಅವರು, ಮತದಾರರಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಶೆಟ್ಟರ್ ಅವರಿಗೆ ಮತ ನೀಡಿ ಎಂದು ವಿನಂತಿಸಿಕೊಂಡರು. ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಅವರು ಕಾರವಾರ ರಸ್ತೆಯ ದೀನ ಬಂಧು ಕಾಲೋನಿ, ಬಂಗ್ಲೆ ಓಣಿ, ಪೊಲೀಸ್ ಕ್ವಾಟರ್ಸ್ ಹಾಗೂ ಹೊಸೂರ ರಸ್ತೆಗಳಲ್ಲಿ ಚುನಾವಣಾ ಪಾದಯಾತ್ರೆ ಕೈಗೊಂಡು ಜಗದೀಶ ಶೆಟ್ಟರ್ ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ವಿನಂತಿಸಿದರು. ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ, ಮಾಜಿ ಮಹಾಪೌರ ವಿಜಯಾನಂದ ಹೊಸಕೋಟಿ, ರವಿ ನಾಯಕ, ವೀರಣ್ಣ ಕಾಶಪ್ಪನವರ ಮತ್ತಿತರರು ಇದ್ದರು.