ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ:ಮಹೇಶ ನಾಲವಾಡ

Rashmi Kasaragodu
Updated On : 23 Apr 2013, 10:29 am

ಹುಬ್ಬಳ್ಳಿ:  ಐದು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿಯ ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ನಾಡಿನ ಜನರು ಬೇಸತ್ತಿದ್ದಾರೆ. ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್‌ನ್ನು ಬೆಂಬಲಿಸಲಿದ್ದಾರೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಡಾ. ಮಹೇಶ ನಾಲವಾಡ ಹೇಳಿದರು.
ಸೋಮವಾರ ಇಲ್ಲಿನ ವಿಜಯನಗರ, ರೆವೆನ್ಯೂ ಕಾಲನಿಯಲ್ಲಿ ಪಾದಯಾತ್ರೆ ಕೈಗೊಂಡು ಮಾತನಾಡಿದ ಅವರು, ಅಲ್ಪಸಂಖ್ಯಾತರು, ದಲಿತರು ನೆಮ್ಮದಿಯ ಜೀವನ ಕಾಣಬೇಕು ಎಂದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಈ ಬಾರಿ ಮತದಾರರು ಕಾಂಗ್ರೆಸ್‌ನತ್ತ ವಾಲಲಿದ್ದಾರೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ ಎಂದು ಹೇಳಿದರು. ಮಹ್ಮದ್ ಯೂಸುಫ ಸವಣೂರ, ಶ್ರೀಧರ ರಡ್ಡೇರ್, ಮೃತ್ಯುಂಜಯ ನಿಲಗುಂದ, ಮೈಕಲ್, ಮಂಜುನಾಥ ಉಳ್ಳಾಗಡ್ಡಿ, ಸುಜಾತಾ ರಡ್ಡಿ, ಬಸವರಾಜ ರಾಯ್ಕರ್, ಮಂಜುನಾಥ ಉಳ್ಳಾಗಡ್ಡಿ, ಸರೋಜಾ ಹೂಗಾರ, ಮೋಹನ ಹೊಸಮನಿ, ಶ್ರೀಧರ ಹೊಸಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement