ನವಲಗುಂದ ತಾಲೂಕಿಗೆ ಹೆಚ್ಚು ಅನುದಾನ: ಮುನೇನಕೊಪ್ಪ
ನವಲಗುಂದ: ಗ್ರಾಮೀಣ ಪ್ರದೇಶದಲ್ಲಿ ಎಸ್ಸಿ, ಎಸ್ಟಿ ಕಾಲನಿಗಳ ಅಭಿವೃದ್ಧಿ ಕೆಲಸಗಳು ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳ ಸುಧಾರಣೆಗಾಗಿ ಕೋಟಿಗಟ್ಟಲೆ ಅನುದಾನವನ್ನು ತಂದಿದ್ದೇನೆ. ಇಂತಹ ಅಭಿವೃದ್ಧಿ ಕೆಲಸಗಳಿಗಾಗಿ ಈ ಬಾರಿ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಮತದಾರಲ್ಲಿ ವಿನಂತಿಸಿದರು.
ಅವರು ತಾಲೂಕಿನ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬಲ್ಲರವಾಡ, ದುಂದೂರ, ಶಿಶ್ವಿನಹಳ್ಳಿ, ಮಣಕವಾಡ, ನಲವಡಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಎಸ್.ಬಿ. ದಾನಪ್ಪಗೌಡರ, ಮಂಜುನಾಥ ಪಾಟೀಲ, ಮಂಜುನಾಥಗೌಡ್ರ, ನಾಗಪ್ಪ ಹರ್ತಿ, ದಾನಪ್ಪಗೌಡ್ರ, ಶಂಕರಣ್ಣ ಅವರಾದಿ, ರುದ್ರಪ್ಪ, ಮಲ್ಲನಗೌಡ ಪಾಟೀಲ ಮುಂತಾದವರು ಇದ್ದರು.