ವಿಷ ಸೇವಿಸಿ ಆತ್ಮಹತ್ಯೆ
ಧಾರವಾಡ: ತಾಲೂಕಿನ ಮಾದನಬಾವಿ ಹಾಗೂ ಕ್ಯಾರಕೊಪ್ಪ ಗ್ರಾಮದ ಇಬ್ಬರು ವಿವಿಧ ಕಾರಣಗಳಿಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಬಾವಿಯ ಬಸವರಾಜ ಮುದಕಪ್ಪ ಡೊಂಬರಕೊಪ್ಪ (25) ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಗೇರಿ ಕೆರೆ ಬಳಿ ಕ್ಯಾರಕೊಪ್ಪ ಗ್ರಾಮದ ಕಲ್ಲಪ್ಪ ನಿಂಗಪ್ಪ ನಾಯ್ಕರ್ (58) ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.