ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿವಳ್ಳಿ ಗ್ರಾಮದಲ್ಲಿ ವಿನಯ ಕುಲಕರ್ಣಿ ಮತಯಾಚನೆ

Rashmi Kasaragodu
Updated On : 24 Apr 2013, 10:54 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 23
ಧಾರವಾಡ ವಿಧಾನಸಭಾ-71 ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಮಂಗಳವಾರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮನೆಗೆ ಮನೆಗೆ ತೆರಳಿ ಮತಯಾಚಿಸಿದರು.  
ಇದೇ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಕೇಳಿದ ಅವರು, ಈ ಹಿಂದೆ ಇದ್ದ ಬಿಜೆಪಿ ಪಕ್ಷದ ಶಾಸಕಿ ಸೀಮಾ ಮಸೂತಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮಹಿಳೆಯರಿಗೆ ಹಾಗೂ ಮಹಿಳಾ ಸಂಘಟನೆಗಳಿಗೆ ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್ಗೆ ಅಮೂಲ್ಯವಾದ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ, ಮಹಿಳಾ ಸಂಘಕ್ಕೆ ಹಲವಾರು ಯೋಜನೆಗಳನ್ನು ನೀಡುವುದಾಗಿ, ಮಹಿಳೆಯರಿಗೆ, ಮಹಿಳಾ ಸಂಘಟನೆಗಳಿಗೆ ಉದ್ಯೋಗ ತರಬೇತಿಗಳನ್ನು ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಗ್ರಾಮೀಣ ಪ್ರದೇಶದ ಸಾಕಷ್ಟು ಯುವಕರಿಗೆ ಉದ್ಯೋಗವಕಾಶ ದೊರೆಯುತ್ತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದರೆ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ ಎಂದು ಆಶ್ವಾಸನೆ ನೀಡಿದರು.
ಜಿಪಂ ಸದಸ್ಯ ಬಸವ್ವ ಪ್ಯಾಟಿ, ಯುವ ಕಾಂಗ್ರೆಸ್ನ ತಾಲೂಕು ಅಧ್ಯಕ್ಷ ಆನಂದ ಕೇಶಗೊಂಡ, ಗ್ರಾಪಂ ಅಧ್ಯಕ್ಷ ಮಹಾದೇವಗೌಡ ಬೆಳೊಗಿ, ಬಸವ್ವ ಶಿವಳ್ಳಿ, ಬಸಪ್ಪ ಕುಂದಗೋಳ, ನಿಂಗಪ್ಪ ಬೆಲಿಂಗನವರ, ಚನ್ನಯ್ಯ ವಸ್ತ್ರದ, ಶಿವಾನಂದ ಮುದ್ದಿ, ಶಿವಾನಂದ ಲಿಂಬಿ, ವಿದ್ಯಾನಂದ ಲಿಂಬಿ, ಸುರೇಶ ಮುಗದ, ಹನುಮಂತಪ್ಪ ಲಕ್ಕನ್ನವರ, ಫಿರೋಜ ನಾಯ್ಕರ, ಕಲ್ಲಪ್ಪ ಕೊಪನ್ನವರ, ಗದಿಗೆಪ್ಪಗೌಡ ಅಗಸಿಮನಿ, ಎಲ್ಲಪ್ಪ ಮುದ್ದಿ, ಚಿದಾನಂದ ಬಾರಕೇರ, ಪರಶುರಾಮ ಕಾಳೆ ಮುಂತಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement