ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜೆಡಿಎಸ್ ಪರ ಅಲೆ: ತಬ್ರೇಜ್

Lingaraj Badiger
Updated On : 26 Apr 2013, 10:57 am

ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣೆ ಅಲೆಯನ್ನು ಗಮನಿಸಿದರೆ ಜೆಡಿಎಸ್ ಗೆಲವಿನ ಹೊಸ್ತಿಲಲ್ಲಿ ಇದೆ. ಯುವಕರ ಅಚ್ಚುಮೆಚ್ಚಿನ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರತ್ತ ಮತದಾರರ ಒಲವು ಹೆಚ್ಚುತ್ತಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ ಹೇಳಿದರು.
ದೇಶಪಾಂಡೆ ನಗರ, ವಿಶ್ವೇಶ್ವರಯ್ಯ ನಗರ, ರಾಜ ನಗರ, ಶಿರಡಿ ನಗರ ಮತ್ತು ವಾರ್ಡ್ ನಂ. 33ರಲ್ಲಿ ಮನೆ ಮನೆ ಪ್ರಚಾರ ಮಾಡಿದ ಅವರು, ಬೆಂಗಳೂರಿನಲ್ಲಿರುವ ಬಹುತೇಕ ಐಟಿ ಉದ್ಯೋಗಿಗಳು ಉತ್ತರ ಕರ್ನಾಟಕದವರೇ ಆಗಿದ್ದು, ಈ ಕಾರಣದಿಂದಾಗಿ ಹುಬ್ಬಳ್ಳಿಯನ್ನೇ ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿಸುವ ಚಿಂತನೆ ಜೆಡಿಎಸ್‌ನಲ್ಲಿ ಬಹುಕಾಲದಿಂದ ನಡೆಯುತ್ತಿದೆ ಎಂದರು. ಉಣಕಲ್ ಮತ್ತು ಸಾಯಿನಗರದಲ್ಲಿ ಗುರುವಾರ ಪಾದಯಾತ್ರೆ ಕೈಗೊಂಡು ಚುನಾವಣಾ ಪ್ರಚಾರ ನೆರವೇರಿಸಿದ ತಬ್ರೇಜ್ ಶಂಸಿ,  ಮಹಿಳಾ ಮಂಡಳದ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಸಮಾಜದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳಿಗೆ ಮತ ನೀಡಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಎಂದು ಉಪಸ್ಥಿತರಿದ್ದ ವಿವಿಧ ಮಹಿಳಾ ಮಂಡಳದ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡರು. ಜೆಡಿಎಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಕಿರಣ್ ಹಿರೇಮಠ, ವಿಜಯ ಅಳಗುಂಡಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement