ನವಲಗುಂದ: ಅತಿ ಹೆಚ್ಚು ಅಭ್ಯರ್ಥಿಗಳು
ಹುಬ್ಬಳ್ಳಿ: ರಾಜ್ಯ ವಿಧಾನಸಭೆಗೆ ಆಯ್ಕೆ ಬಯಸಿ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನವಲಗುಂದ ವಿಧಾನಸಭೆ ಕ್ಷೇತ್ರದಿಂದ 16 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದೀಗ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿಯೂ 16 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
1994ರಲ್ಲಿ ನಡೆದ ಚುನಾವಣೆಯಲ್ಲಿ ಕೆಸಿಪಿ ಅಭ್ಯರ್ಥಿಯಾಗಿದ್ದ ಕೆ.ಎನ್. ಗಡ್ಡಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಕುಲಕರ್ಣಿ ಸೋತ ಸಮೀಪದ ಪ್ರತಿಸ್ಪರ್ಧಿಯಾಗಿದ್ದರು. ಜನತಾದಳದಿಂದ ಬಿ.ಬಿ. ಗಾಣಿಗೇರ, ಕೆಆರ್ಆರ್ಎಸ್ನಿಂದ ಈಶ್ವರಚಂದ್ರ ಹೊಸಮನಿ, ಬಿಜೆಪಿಯಿಂದ ಆನಂದ ಹೊಸಗೌಡ್ರ, ಪಕ್ಷೇತರರಾಗಿ ಡಾ. ಆರ್.ಬಿ. ಶಿರಿಯಣ್ಣವರ, ಅಬ್ದುಲ್ಸತ್ತಾರ ಖಾಜಿ, ರಾಮಪ್ಪ ಯಳವಟ್ಟಿ, ಮಂಜುನಾಥಗೌಡ ಪಾಟೀಲ, ಫಕ್ಕಿರಪ್ಪ ದಿಬ್ಬದ, ರವೀಂದ್ರ ಜೈನರ, ಭರಮಪ್ಪ ಬವಡಿ, ಫಕ್ಕಿರಗೌಡ್ರ ಶಿವನಗೌಡ, ಎನ್.ಎಸ್. ಗೌಡನಾಯಕರ, ಮಾಬೂಬಸಾಬ ನಾಯಕರ ಹಾಗೂ ಮಹದೇವಯ್ಯ ತಡಸದಮಠ ಕಣದಲ್ಲಿದ್ದ ಇನ್ನಿತರ ಅಭ್ಯರ್ಥಿಗಳಾಗಿದ್ದರು. ನಂತರ 1999ರಲ್ಲಿ ನಡೆದ ಚುನಾವಣೆಯಲ್ಲಿ 9 ಸ್ಪರ್ಧಿಗಳು, 2004ರಲ್ಲಿ 9 ಅಭ್ಯರ್ಥಿಗಳು ಹಾಗೂ 2008ರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ 1994ರಂತೆ ಈ ಬಾರಿಯೂ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ನ ಕೆ.ಎನ್. ಗಡ್ಡಿ, ಜೆಡಿಎಸ್ನ ಎನ್.ಎಚ್. ಕೋನರಡ್ಡಿ, ಕೆಜೆಪಿಯ ಡಾ. ಆರ್.ಬಿ. ಶಿರಿಯಣ್ಣನವರ, ಬಿಎಸ್ಪಿಯ ಯಲ್ಲಪ್ಪ ದುಂದೂರ, ರಾಣಿ ಚನ್ನಮ್ಮ ಪಾರ್ಟಿಯ ಗುರುಶಾಂತಪ್ಪ ಚಲವಾದಿ, ಲೋಕಜನಶಕ್ತಿ ಪಕ್ಷದ ಚಂದ್ರಶೇಖರ ಬುಗಟಿ, ಜೆಡಿಯುದ ಪ್ರಕಾಶಗೌಡ ಮೇಟಿಗೌಡರ, ಬಿಎಸ್ಆರ್ನ ಶಂಭುಲಿಂಗಪ್ಪ ಸಿದ್ರಾಮಶೆಟ್ಟರ, ಪಕ್ಷೇತರ ಅಭ್ಯರ್ಥಿಗಳಾದ ಶಿವಾನಂದ ಕರಿಗಾರ, ಬಸವಣ್ಣೆಪ್ಪ ಕಂದ್ರೊಳ್ಳಿ, ಮೊಹ್ಮದಸಾಬ್ ಡಾಕ್ಟರ್, ಆರ್.ಡಿ. ರಂಗಸ್ವಾಮಿ, ವಿನಯಕುಮಾರ ಮ್ಯಾಗೇರಿ, ವಿರೂಪಾಕ್ಷಗೌಡ ಕುಲಕರ್ಣಿ, ಸುಭಾಷಚಂದ್ರ ಪಾಟೀಲ ಈ ಬಾರಿ ರೆಸ್ನಲ್ಲಿರುವ ಅಭ್ಯರ್ಥಿಗಳು.
1994ರ ಚುನಾವಣೆಯಲ್ಲಿ 11 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಪ್ರಸ್ತುತ 2013ರಲ್ಲಿ 7 ಪಕ್ಷೇತರರು ಕಣಕ್ಕಿಳಿದಿದ್ದಾರೆ.
ಕಣದಲ್ಲಿದ್ದ ಅಭ್ಯರ್ಥಿಗಳು: 1957ರಲ್ಲಿ ಇಬ್ಬರು, 1962ರಲ್ಲಿ ಮೂವರು, 1967ರಲ್ಲಿ ಮೂವರು, 1972ರಲ್ಲಿ ಮೂವರು, 1978ರಲ್ಲಿ ಮೂವರು, 1983ರಲ್ಲಿ 7 ಅಭ್ಯರ್ಥಿಗಳು, 1985ರಲ್ಲಿ 11 ಅಭ್ಯರ್ಥಿಗಳು, 1989ರಲ್ಲಿ 9 ಅಭ್ಯರ್ಥಿಗಳು, 1994ರಲ್ಲಿ 16 ಅಭ್ಯರ್ಥಿಗಳು, 1999ರಲ್ಲಿ 9 ಅಭ್ಯರ್ಥಿಗಳು, 2004ರಲ್ಲಿ 9 ಅಭ್ಯರ್ಥಿಗಳು ಹಾಗೂ ಕ್ಷೇತ್ರ ಪುನರ್ ವಿಂಗಡಣೆ ನಂತರ 2008ರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು.
ಈವರೆಗೆ ಗೆದ್ದವರು: 1957, 1962, 1967ರಲ್ಲಿ ಕಾಂಗ್ರೆಸ್ನ ಆರ್.ಎಂ. ಪಾಟೀಲ, 1972ರಲ್ಲಿ ಎನ್ಸಿಓದ ಎಂ.ಕೆ. ಕುಲಕರ್ಣಿ, 1978ರಲ್ಲಿ ಕಾಂಗ್ರೆಸ್ನ ಎಸ್.ಪಿ. ಪಾಟೀಲ, 1983, 1985, 1989ರಲ್ಲಿ ಕಾಂಗ್ರೆಸ್ನ ಎಂ.ಕೆ. ಕುಲಕರ್ಣಿ, 1994, 1999ರಲ್ಲಿ ಕೆಸಿಪಿಯ ಕೆ.ಎನ್. ಗಡ್ಡಿ, 2004ರಲ್ಲಿ ಬಿಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ ಹಾಗೂ 2008ರಲ್ಲಿ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ನವಲಗುಂದ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಸದ್ಯದ ಚುನಾವಣೆಯಲ್ಲಿ ಹಾಲಿ ಶಾಸಕ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಕಾಂಗ್ರೆಸ್ನ ಕೆ.ಎನ್. ಗಡ್ಡಿ ಹಾಗೂ ಮಾಜಿ ಶಾಸಕ ಕೆಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ ಮಧ್ಯೆ ತೀವ್ರ ಪೈಪೋಟಿ ಖಚಿತ. ಈ ಚುನಾವಣೆಯಲ್ಲಿ ಮೂರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿರುವ ಮುನೇನಕೊಪ್ಪ, ಗಡ್ಡಿ ಹಾಗೂ ಶಿರಿಯಣ್ಣವರ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ ಗೆಲುವು ಸಾಧಿಸಿದವರೇ. ಕಾಂಗ್ರೆಸ್ನ ಕೆ.ಎನ್. ಗಡ್ಡಿ ಎರಡು ಬಾರಿ (1994ರಲ್ಲಿ ಕೆಸಿಪಿಯಿಂದ ಹಾಗೂ 1999ರಲ್ಲಿ ಕಾಂಗ್ರೆಸ್ನಿಂದ) ಜಯ ಸಾಧಿಸಿದ್ದರೆ, ಕೆಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ ಒಂದು ಬಾರಿ (2004ರಲ್ಲಿ ಬಿಜೆಪಿಯಿಂದ) ಹಾಗೂ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಒಂದು ಬಾರಿ (2008ರಲ್ಲಿ) ಗೆಲುವು ಸಾಧಿಸಿದ್ದರು.