ಪಿಎಂ ಸಭೆಗೆ ಮೈದಾನ ಇಲ್ಲ ಎಂದಿಲ್ಲ: ಸ್ಪಷ್ಟನೆ
ಹುಬ್ಬಳ್ಳಿ: ಪ್ರಧಾನಿ ಮನಮೋಹನ್ಸಿಂಗ್ ಚುನಾವಣಾ ಭಾಷಣಕ್ಕೆ ಹುಬ್ಬಳ್ಳಿ ನೆಹರು ಮೈದಾನ ಲಭ್ಯವಿಲ್ಲವೆಂಬಂತೆ ತಮ್ಮ ಹೆಸರನ್ನು ಬಳಸಿ ಪ್ರಕಟಿಸಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಸ್ಪಷ್ಟಪಡಿಸಿದ್ದಾರೆ. ಏ. 29ರಂದು ಪ್ರಧಾನಿ ಮನಮೋಹನ್ಸಿಂಗ್ ನೆಹರು ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು, ಭದ್ರತೆ ದೃಷ್ಟಿಯಿಂದ ಈ ಸ್ಥಳ ಸೂಕ್ತವಲ್ಲವೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆಂದು ತಮ್ಮ ಹೆಸರು ಬಳಸಿ ವರದಿ ಪ್ರಕಟಿಸಿದ್ದಾರೆ. ಆದರೆ, ತಾವು ಯಾವುದೇ ಪತ್ರಿಕೆಗೆ ಈ ಕುರಿತು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ಎಂದು ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ತಿಳಿಸಿದ್ದಾರೆ.