ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಜೆಪಿಯದ್ದು ಉತ್ತಮ ಆಡಳಿತ: ಚಂದ್ರು

Lingaraj Badiger
Updated On : 26 Apr 2013, 10:57 am

ಹುಬ್ಬಳ್ಳಿ:   ಅಧಿಕಾರಕ್ಕಾಗಿ ನಮ್ಮೊಂದಿಗೆ ಸೇರಿಕೊಂಡ ಬೇರೆ ಪಕ್ಷದವರು ಹಗರಣಗಳಲ್ಲಿ ಭಾಗಿಯಾದರು. ಇದೇ ಕಾರಣಕ್ಕಾಗಿ ಬಿಜೆಪಿ ಉತ್ತಮ ಆಡಳಿತ ನೀಡಿದರೂ ಆಡಳಿತ ಮತ್ತು ಪಕ್ಷದಲ್ಲಿ ಗೊಂದಲ ಕಾಣಿಸಿಕೊಂಡಿತು ಎಂದು 'ಮುಖ್ಯಮಂತ್ರಿ' ಚಂದ್ರು ಹೇಳಿದರು.
ಗುರುವಾರ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದೆ. ಮೂರು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪಕ್ಷದ ನಾಯಕರೊಬ್ಬರು ಉತ್ತಮ ಆಡಳಿತ ನೀಡಿ ಈಗ ಪಕ್ಷದಿಂದ ಹೊರಗೆ ಹೋಗಿದ್ದಾರೆ. ನಂತರದ ಬಂದ ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಉತ್ತಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಧನಂಜಯಕುಮಾರ್‌ಗೆ ಮಾತಿನೇಟು: ರಾಷ್ಟ್ರದ ಹಿರಿಯ ಮುಖಂಡರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಕೆಜೆಪಿ ವಕ್ತಾರ ಧನಂಜಯಕುಮಾರ್ ಅವರು ಎಲ್.ಕೆ. ಆಡ್ವಾಣಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ. ಅವರದ್ದೇ ಪಕ್ಷದ ಅಧ್ಯಕ್ಷರು ಅವರು ಏಕೆ ಹಾಗೇ ಹೇಳಿದರೋ ಗೊತ್ತಿಲ್ಲ. ಅಂತಹ ಹಿರಿಯರ ಬಗ್ಗೆ ಹಾಗೆ ಮಾತನಾಡಬಾರದಿತ್ತು. ಅವರ ಹೇಳಿಕೆಗೆ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳುವ ಮೂಲಕ ಇಡೀ ವೈಯಕ್ತಿಕ ನಿಂದನೆ ಘಟನೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತಾರೆ.  ಧನಂಜಯಕುಮಾರ್ ಅವರು ಈ ರೀತಿ ಹೇಳಿಕೆ ನೀಡುತ್ತ ಮುಂದುವರಿದಲ್ಲಿ ಆನೆ ಹೋಗುತ್ತಿರುತ್ತದೆ ಶ್ವಾನ ಬೋಗಳುತ್ತಿರುತ್ತದೆ ಎನ್ನುವ ಲೆಕ್ಕಕ್ಕೆ ಜನಸಾಮಾನ್ಯರು ಬರಬೇಕಾಗುತ್ತದೆ. ಈ ಕಾರಣಕ್ಕಾಗಿಯಾದರೂ ಧನಂಜಯಕುಮಾರ್ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಸೂಕ್ತ ಎಂದು ಹೇಳಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement