ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಂಗ್ರೆಸ್ ಅಭ್ಯರ್ಥಿ ಅಬ್ಬಯ್ಯಗೆ ಬೆಂಬಲ

Lingaraj Badiger
Updated On : 27 Apr 2013, 11:10 am

ಹುಬ್ಬಳ್ಳಿ: ದಲಿತ ಸಮಾಜದ ಬೃಹತ್ ಮೆರವಣಿಗೆಯ ಮೂಲಕ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯಗೆ ವಾರ್ಡ್ 50 ಮತ್ತು 67ರ ಮತದಾರರು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ದಲಿತ ಸಮುದಾಯದ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಯುಪಿಎ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಕುರಿತು ಕಾರ್ಯಕರ್ತರು ದಲಿತರಿಗೆ ವಿವರಣೆ ನೀಡಬೇಕು ಎಂದರು. ಕಾಂಗ್ರೆಸ್ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮಾರುತೆಣ್ಣ ಗೋಕಾಕ ಅವರ ಅವರ ನೇತೃತ್ವದಲ್ಲಿ ದಲಿತ ಮುಖಂಡರಾದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಯಮನೂರ ಗುಡಿಹಾಳ, ಯಮನೂರ ಜಾಧವ, ಪಾಲಿಕೆ ಸದಸ್ಯೆ ಲಕ್ಷ್ಮಿ ಜಾಧವ, ಮೋಹನಾಂಬಾ ಗುಡಿಹಾಳ, ಶ್ಯಾಮ ಜಾಧವ, ಧರ್ಮು ದೊಡಮನಿ, ಪರಶುರಾಮ ಕೊರವರ, ಚಂದ್ರು ಮುಳಗುಂದ, ಬೇಬಿ ರೋಣ, ತಿಪ್ಪಣ್ಣ ಮುಳಗುಂದ, ಶೋಭಾ ಕನ್ನೇಶ್ವರ, ಸುಮಿತ್ರಾ ಪೀಟರ್, ಶಿವಣ್ಣ ಬಿಜವಾಡ ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement