ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿನಯ್ ಕುಲಕರ್ಣಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ

Lingaraj Badiger
Updated On : 27 Apr 2013, 11:11 am

ಧಾರವಾಡ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಶುಕ್ರವಾರ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪ್ರಚಾರಾರ್ಥ ಆಗಮಿಸಿದಾಗ ಮಕ್ಕಳು, ಯುವಕ-ಯುವತಿಯರು ಅವರನ್ನು ಮುತ್ತಿಕೊಂಡು ಜೈಕಾರ ಕೂಗಿದರು. ಅರ್ಧ ಗಂಟೆ ಅವರ ಬೆನ್ನು ಬಿಡದೆ 'ದರ್ಶನ' ಪಡೆದರು.
ಸಂಜೆ 4ರ ಹೊತ್ತಿಗೆ ಬೆಳಗಾವಿಯಿಂದ ದಾರವಾಡ ತಾಲೂಕಿನ ನರೇಂದ್ರ ಗ್ರಾಮಕ್ಕೆ ಆಗಮಿಸಿದ ದರ್ಶನ್ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ವಿನಯ ಕುಲಕರ್ಣಿ ಪರ ಪ್ರಚಾರ ಮಾಡಿದರು. ವಿನಯ ಕುಲಕರ್ಣಿ ಜತೆ ಅನೇಕ ವರ್ಷಗಳ ಸ್ನೇಹವಿದೆ. ನಾನಿಲ್ಲಿ ರಾಜಕೀಯ ಉದ್ದೇಶದಿಂದ ಬಂದಿಲ್ಲ. ಅವರ, ನಿಮ್ಮ ಸ್ನೇಹಕ್ಕೆ ಬಂದಿದ್ದು, ಈ ಬಾರಿ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ದರ್ಶನ್, ನಾನು ಯಾವುದೇ ಪಕ್ಷದ ಸ್ವತ್ತಲ್ಲ. ಯಾವ ಪಕ್ಷದ ಪರವೂ ಇಲ್ಲ. ಸ್ನೇಹಕ್ಕಾಗಿ ಕೆಲವೆಡೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಚಿತ್ರರಂಗದ ರಾಜಕೀಯದಿಂದಲೇ ನಾನು ದೂರವಿದ್ದು, ಈ ರಾಜಕೀಯ ಏತಕ್ಕೆ ಬೇಕು? ಎಂದರು.
ಗರಗ ಗ್ರಾಮದಲ್ಲಿ ದರ್ಶನ್ ಪ್ರಚಾರ ಭಾಷಣ ಮಾಡಿದರು. ಉಪ್ಪಿನ ಬೆಟಗೇರಿ, ಅಮ್ಮಿನಬಾವಿ, ಹೆಬ್ಬಳ್ಳಿಯಲ್ಲೂ ಪ್ರಚಾರ ನಡೆಸಿದರು. ರಾತ್ರಿ ನಗರದ 3ರಿಂದ 10ನೇ ವಾರ್ಡ್‌ಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಪ್ರಭು ಕೇಶಗೊಂಡ, ಮನೋಜ ಕರ್ಜಗಿ, ಆನಂದ ಸಿಂಗನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement