ಎರಡು ಬಾಲ್ಯ ವಿವಾಹಕ್ಕೆ ತಡೆ
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಪ್ರತ್ಯೇಕ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಇಲ್ಲಿನ ತಹಸೀಲ್ದಾರ್ ನೇತೃತ್ವದ ತಂಡ ಶನಿವಾರ ಯಶಸ್ವಿಯಾಗಿದೆ. ಗ್ರಾಮದ ಮನೆಯೊಂದರ ಎದುರು ವಿವಾಹವಾಗಲು ಸಿದ್ಧರಾಗುತ್ತಿದ್ದ ಮಂಜುನಾಥನಿಗೆ 23 ವಯಸ್ಸು, ತಿಗಡೊಳ್ಳಿ ಮೂಲದ ಬಾಲಕಿ ನಿರ್ಮಲಾಗೆ 17 ವರ್ಷ 10 ತಿಂಗಳು ವಯಸ್ಸು. ಅದರಂತೆ ಅದೇ ಮಂಟಪದಲ್ಲಿ ಮದುವೆಯಾಗುತ್ತಿದ್ದ ಇನ್ನೋರ್ವ ಮಂಜುನಾಥಗೆ 21 ಹಾಗೂ ಈತ ಮದುವೆಯಾಗುವ ನೀಲವ್ವಗೆ 16 ವರ್ಷವಿದ್ದ ಕಾರಣ ಮದುಮಕ್ಕಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.