ಮರಾಠಾ ಕಾಲನಿಯಲ್ಲಿ ಮೋರೆ ಪ್ರಚಾರ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 28
ಇಲ್ಲಿನ 12ನೇ ವಾರ್ಡ್ನ ಮರಾಠಾ ಕಾಲನಿಯ ಕಲ್ಯಾಣ ಮಂಟಪವೊಂದರಲ್ಲಿ ಸ್ಥಳೀಯ ನಿವಾಸಿಗಳ ಜತೆ ಹು-ಧಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಎಸ್.ಆರ್. ಮೋರೆ, ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ಗೆ ಬೆಂಬಲ ನೀಡಿದರೆ ಬಡವರು ಹಾಗೂ ಮಧ್ಯಮ ವರ್ಗದವರು ಜೀವಿಸಲು ಸಾಧ್ಯ. ಬಿಜೆಪಿ ಶಾಸಕರು ಭ್ರಷ್ಟರಾಗಿದ್ದು, ಇಡೀ ನಾಡನ್ನು ನುಂಗಿ ನೀರು ಕುಡಿಯುತ್ತಾರೆ. ಕಾಂಗ್ರೆಸ್ ಸರ್ಕಾರ ಕೆಳ ಮಟ್ಟದ ಜನತೆ ಮೇಲ್ಮಟ್ಟಕ್ಕೆ ಬರುವ ಯೋಜನೆಗಳನ್ನು ಜಾರಿಗೆ ತಂದು ಸಮಾನ ಜೀವನ ಕಲ್ಪಿಸಿದೆ. ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಅಜಿತ ಭೋಗಾರ, ಚಿದಾನಂದ ಸೌದತ್ತಿ, ಸುನೀಲ ಹೊಂಗಲ, ರಾಜು ಕುಚ್ಚೆಕರ, ರಮೇಶ ಗಡ್ನಟ್ಟಿ, ಸುಹಾಸ ಮಾನೆ, ಸಂತೋಷ ಬಿರ್ಜನ್ನವರ, ಸತೀಶ ಗುರ್ಲಹೊಸೂರ, ರತ್ನಾ ಪಾಟೀಲ, ಪ್ರಭಾವತಿ ಶಿಂಧೆ ಮತ್ತಿತರರು ಇದ್ದರು.