ಲಿಂಬಿಕಾಯಿ ಪರ ಸಾಹಿತಿ ಚಂಪಾ ಪ್ರಚಾರ
ಧಾರವಾಡ: ಹು-ಧಾ ಪಶ್ಚಿಮ ಮತ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರ ಸಾಹಿತಿ ಚಂದ್ರಶೇಖರ ಪಾಟೀಲ ನಗರದಲ್ಲಿ ಮತ ಯಾಚಿಸಿದರು.
ಗಾಂಧೀ ಚೌಕದಿಂದ ಪಾದಯಾತ್ರೆ ಮೂಲಕ ಕೆಸಿಸಿ ಬ್ಯಾಂಕ್, ಸುಭಾಷ ರಸ್ತೆ, ನೆಹರು ಮಾರುಕಟ್ಟೆ, ಅಕ್ಕಿಪೇಟೆ, ಸಿಬಿಟಿ, ಟಿಕಾರೆ ರಸ್ತೆ, ಲೈನ ಬಜಾರ, ಮಸಾಲಗಾರ ಓಣಿ, ಬುಸಪ್ಪ ಚೌಕ, ಮುಂತಾದ ಕಡೆ ಸಂಚರಿಸಿ ವಿವೇಕಾನಂದ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಕಡಿಮೆಯಾಗುತ್ತಿದೆ. ಆಯಾ ರಾಜ್ಯಗಳಲ್ಲಿ ನೆಲ-ಜಲ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಾಗುತ್ತವೆ. ಆದ್ದರಿಂದ ಈಗ ಕಾಲ ಪಕ್ವವಾಗಿದೆ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ ಕೆಜೆಪಿಗೆ ಭವಿಷ್ಯವಿದೆ. ಆದ್ದರಿಂದ ಜನತೆ ಅವರು ಕೈ ಬಲಪಡಿಸಿ ಕೆಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡುವ ಗುರುತರವಾದ ಜವಾಬ್ದಾರಿ ಮತದಾರರಿಗೆ ಇದೆ ಎಂದರು.
ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿದರು. ಮುಖಂಡರಾದ ರಾಜು ಮೋಗಿ, ಎನ್.ಎಸ್. ಬಿರಾದರ, ಅಶೋಕ ನಿಡವನಿ, ಲಕ್ಷ್ಮಣ ಬೀಳಗಿ, ಪ್ರಕಾಶ ಜಕಾತಿ, ರಿಯಾಜ ಶಫಿ ಬಿಜಾಪುರಿ, ನಯಾಜ ಕಿತ್ತೂರು, ರಾಜು ಮರಳಪ್ಪನವರು, ಸುಧೀರ ಕ್ಷತ್ರಿ, ರವಿ ಬಾಂಡಗೆ, ರಾಜೆಂದ್ರ ಸಾವಳಗಿ, ಧರಣೆಪ್ಪ ಗೌಡ್ರು, ಮಂಜುಳಾ ಮೆಹರವಾಡ, ಶಾರದಾ ರಾಯಚೂರ, ಮಂಗಲಾ ಮಳೆಕರ, ಪಾರ್ವತಿ ಆಕಳವಾಡಿ, ಪುಷ್ಪಾ ನಾಜರೆ, ಸಂತೋಷ ಉಪಾಧ್ಯ, ಜಗದೀಶ ಹೊಳೆಯಣ್ಣವರ, ಶಂಕರ ಕೆಂಗಾನೂರ, ಶಿವಾನಂದ ಮುದಿಯಪ್ಪನವರ, ಸಂತೋಷ ದೇವರಡ್ಡಿ, ಪ್ರಸಾದ ನಾಡಗೌಡ, ಮೈಲಾರ ಉಪ್ಪಿನ, ರಾಮನಗೌಡ ಕಿತ್ತೂರ, ಸಿದ್ಧು ಪಾಟೀಲ, ಶಿವರಾಜ ಪಾಟೀಲ ಇದ್ದರು.
--