ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತಮ್ಮ ಗೆಲವಿಗೆ ತೊಂದರೆ ಯಾರಿಂದಲೂ ಇಲ್ಲ

Vishwanath S
Updated On : 1 May 2013, 11:28 am

ಧಾರವಾಡ: ಈ ಮೊದಲು ಸ್ಲಂಗಳು ಕಾಂಗ್ರೆಸ್ಸಿನ ವೋಟ್ ಬ್ಯಾಂಕ್‌ಗಳಾಗಿದ್ದವು. ಆದರೀಗ ಸ್ಲಂ ಸೇರಿದಂತೆ ಕ್ಷೇತ್ರದ ಜನತೆ ರಾಜಕೀಯ ಹಿತದೃಷ್ಠಿಯಿಂದ ಯುವಕರನ್ನು ಬೆಂಬಲಿಸುತ್ತಿದ್ದು, ತಾವು ಗೆಲ್ಲುವುದು ಖಚಿತ ಎಂದು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್, ಕೆಜೆಪಿ ಹಾಗೂ ಬಿಜೆಪಿ ಬಂಡುಕೋರ ಅಭ್ಯರ್ಥಿಗಳಿಂದ ತಮ್ಮ ಗೆಲುವಿಗೆ ಯಾವುದೇ ರೀತಿ ತೊಂದರೆ ಇಲ್ಲ. ನಮ್ಮ ತಂದೆ ಚಂದ್ರಕಾಂತ ಬೆಲ್ಲದ ಅವರು ಕ್ಷೇತ್ರದಲ್ಲಿ ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ತಮ್ಮೊಂದಿಗೆ ಪ್ರಬಲ ಪೈಪೋಟಿ ಒಡ್ಡಲಿದ್ದಾರೆ. ಉಳಿದ ಯಾವ ಪಕ್ಷಗಳು ಪೈಪೋಟಿಯಾಗಲಾರವು. ತಾವು ಆಯ್ಕೆಯಾಗಿ 60 ದಿನಗಳಲ್ಲಿ ಹು-ಧಾ ವಿಶನ್ ಆರಂಭಿಸಲಾಗುವುದು. ವಿಶನ್‌ಗೆ ರಾಜಕೀಯ, ಸಾಹಿತ್ಯ, ವ್ಯಾಪಾರ ವರ್ಗ ಹೀಗೆ ವಿವಿಧ ಕ್ಷೇತ್ರದ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿಕೊಂಡು ಧಾರವಾಡದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಭರವಸೆ ನೀಡಿದರು. ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಿದ್ದು ಇದೇ ಪ್ರಥಮ. ಹಲವು ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರದ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ನನ್ನ ಗೆಲುವಿನಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಸುರೇಶ ಬೇದರೆ, ಕಾಮತ್, ಮೋಹನ ರಾಮದುರ್ಗ ಸುದ್ದಿಗೋಷ್ಠಿಯಲ್ಲಿದ್ದರು.

ಅನುಭವಿ ಮೋರೆಬೆಂಬಲಿಸಿ: ನಟಿ ರಮ್ಯಾ
ಧಾರವಾಡ: ನಾಲ್ಕೈದು ದಿನಗಳಲ್ಲಿ ಧಾರವಾಡ, ಹು-ಧಾ ಪಶ್ಚಿಮ ಕ್ಷೇತ್ರಗಳ ಮತದಾರರಲ್ಲಿ ಖುಷಿಯೋ ಖುಷಿ. ಚಿತ್ರನಟರ ದಂಡೇ ಧಾರವಾಡಕ್ಕೆ ಬರುತ್ತಿದ್ದು, ವಿವಿಧ ಪಕ್ಷದ ಮುಖಂಡರ ಪರ ಬೆಂಬಲ ಕೋರುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ನಟಿ ರಮ್ಯಾ ಇಲ್ಲಿನ ಕಲಾಭವನದಿಂದ ವಿವಿಧೆಡೆ ರೋಡ್ ಶೋ ಮಾಡುವ ಮೂಲಕ ಗಮನ ಸೆಳೆದರು. ಈ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ. ಜೆಡಿಎಸ್ ತಂದೆ-ಮಕ್ಕಳ ಪಕ್ಷ. ಇವರಿಂದ ರಾಜ್ಯದ ಅಭಿವೃದ್ಧಿ ಕನಸಾಗಿ ಉಳಿಯಲಿದೆ. ಎಸ್.ಎಂ. ಕೃಷ್ಣ, ಮೋರೆ ಅಂಥವರನ್ನು ಹೊಂದಿದ ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದರು. ಅಭ್ಯರ್ಥಿ ಎಸ್.ಆರ್. ಮೋರೆ, ಮಹೇಶ ಶೆಟ್ಟಿ, ಮನೋಜ ಕರ್ಜಗಿ, ಶ್ರೀಧರ ಶೇಠ, ಆನಂದ ಸಿಂಗನಾಥ, ಹೇಮಂತ ಗುರ್ಲಹೊಸುರ, ಬಾಬು ಗೌಳಿ, ಮಂಜುನಾಥ ಭೋವಿ, ಆನಂದ ಜಾಧವ, ಸತ್ಯಜೀತ ಮೋರೆ, ಬಸಪ್ಪ ಮಾಲನವರ, ಆನಂದ ಮುಶಣ್ಣವರ, ಇಮ್ತಿಯಾಜ ಮುಲ್ಲಾ, ಶಫಿ ಕಳ್ಳಿಮನಿ, ಈರಪ್ಪ ಕಿತ್ತೂರ, ವಿದ್ಯಾ ಪಾಲನಕರ, ಮಂಜು ಕದಂ, ಬಸವರಾಜ ಮಟ್ಟಿ, ರವಿ ಲೋಲೆ, ಎಂ.ಆರ್. ಸೂರ್ಯವಂಶಿ, ಭಾಷಾ ಬಳ್ಳಾರಿ, ವಿನಾಯಕ ಕಟಗಿ, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement