ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುಸ್ಥಿರ ಆಡಳಿತಕ್ಕೆ ಕೈ ಬೆಂಬಲಿಸಿ

Vishwanath S
Updated On : 1 May 2013, 11:26 am

ಹುಬ್ಬಳ್ಳಿ: ಸಾಮಾಜಿಕ ನ್ಯಾಯ, ಅಭಿವೃದ್ಧಿ, ಸುಸ್ಥಿರ ಆಡಳಿತ ಮತ್ತು ದಲಿತರ ಏಳ್ಗೆಗಾಗಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಸಂಸದ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೂರ್ವ(ಮೀಸಲು) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಪರ ಮತಯಾಚಿಸಿ ಅವರು ಮಾತನಾಡಿದರು.
ನಗರದ ಕ್ರಿಶ್ಚಿಯನ್ ಸಮುದಾಯವನ್ನ್ನು ಉದ್ದೇಶಿಸಿ ಅವರು ಮಾತನಾಡಿದರು. 5 ವರ್ಷ ರಾಜ್ಯವನ್ನು ಆಳಿದ ಬಿಜೆಪಿಯ ಆಂತರಿಕ ಕಚ್ಚಾಟ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬಡವರ ವಿರೋಧಿ ಧೋರಣೆಯಿಂದ ರಾಜ್ಯದ ಜನರು ಭ್ರಮನಿರಸನಗೊಂಡಿದ್ದಾರೆ.
ಮತ ಹಾಕುವ ಮುನ್ನ್ನ ಯೋಚಿಸಿ
ಒಂದು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನೋಡಿದ್ದೀರಾ. ಅಧಿಕಾರಕ್ಕಾಗಿ ಆ ಪಕ್ಷದ ನಾಯಕರು ಆಡಿದ ದೊಂಬರಾಟ ಕೂಡ ನೋಡಿದ್ದೀರಿ ಆದ್ದರಿಂದ ಈ ಬಾರಿ ನಿರ್ಣಾಯಕ  ಪಾತ್ರ ವಹಿಸುವುದನ್ನ್ನು ಮರೆಯಬೇಡಿ ಎಂದು ಹೇಳಿದರು.
ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿದೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸ್ವತಂತ್ರವಾಗಿ ಅಧಿಕಾರಕ್ಕೆ ಏರುವುದು ಶತಃಸಿದ್ಧ ಎಂದು ಆಸ್ಕರ್ ಫರ್ನಾಂಡಿಸ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಫಾ. ಗಾಂಧಿ, ಫಾ. ಮಬ್ಬುಶೇಖರ, ಫಾ. ಎ. ರಾಜಾರಾವ್, ಫಾ. ಸಾಯಿರಾಮ್, ಫಾ. ಬಿ.ಎ. ಪ್ರಭುದಾಸ್, ಫಾ. ಬಿ. ಚಿನ್ಮಯಿ, ಫಾ. ದೇವಿರಾಜ್, ಫಾ. ಶಾಮರಾವ್, ಫಾ. ನಿಸಾಲಮನೆ, ಫಾ. ಜಾನ್, ಫಾ. ಇಸ್ರೇಲ್, ಫಾ. ಜಾನ್ ವಿಲಿಯಮ್ಸ್, ಫಾ. ಸ್ಟೇಫಿನ್ಸ್, ಎವನ್ ಗುಡಗಂಟಿ, ರಾಜು ಲದವಾ, ಬಲವಂತ ಗುಂಡಮಿ, ಬಲವಂತ ಗುಂಡಮಿ, ಉಜ್ವಲ ಗುಂಡಮಿ, ಇಮ್ಯಾನುಯೇಲ್ ಕ್ಷಿರಸಾಗರ ಸಭೆಯಲ್ಲಿ ಇದ್ದರು.
ಕಾಂಗ್ರೆಸ್‌ನ ಪರಿಶಿಷ್ಟ ಜಾತಿ, ಪಂಗಡ ಘಟಕದ ರಾಜ್ಯಾಧ್ಯಕ್ಷ ಎಂ. ಮಂಜುನಾಥ, ರಾಜಾ ದೇಸಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸದಾನಂದ ಡಂಗನವರ, ಸುಧಾ ಮಣಿಕುಂಟ್ಲ, ದೊರೆರಾಜ ಮಣಿಕುಂಟ್ಲ, ವೈ.ಜೆ. ಜಾಧವ, ಯಮನೂರ ಗುಡಿಹಾಳ, ಮೋಹನ ಅಸುಂಡಿ, ಪ್ರಕಾಶ ಬುರಬುರಮೆ ಚುನಾವಣಾ ಪ್ರಚಾರದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement