ಜನಸ್ನೇಹಿ ಕೇಂದ್ರದಲ್ಲಿಸಮಸ್ಯೆ: ಪ್ರತಿಭಟನೆ
ಧಾರವಾಡ: ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಜನಸ್ನೇಹಿ ಕೇಂದ್ರಗಳಿಂದ ರೈತರಿಗೆ ಅನುಕೂಲವಾಗದೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮುಖಂಡರ ನೇತೃತ್ವದಲ್ಲಿ ರೈತರು ಶುಕ್ರವಾರ ದಿಢೀರ್ ಪ್ರತಿಭಟನೆ ಮಾಡಿದರು.
ಜನಸ್ನೇಹಿ ಕೇಂದ್ರದಲ್ಲಿ ಮುದ್ರಣ ಯಂತ್ರ, ಕಂಪ್ಯೂಟರ್ ಆಗಾಗ ರಿಪೇರಿಗೆ ಬರುತ್ತದೆ. ವಿದ್ಯುತ್ ಸಂಪರ್ಕ ಕಡಿತದಿಂದ ಗಂಟೆಗಟ್ಟಲೆ ಪಹಣಿ ಹಾಗೂ ಇನ್ನಿತರೆ ಪ್ರಮಾಣ ಪತ್ರಗಳಿಗೆ ಕಾಯಬೇಕಾಗಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ತಹಸೀಲ್ದಾರ್ ಅವರನ್ನು ರೈತರು ಒತ್ತಾಯಿಸಿದರು. ಅಲ್ಲದೇ, ಎರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಬಿಜೆಪಿ ಯುವ ಮುಖಂಡ ಮಂಜುನಾಥ ನಡಕಟ್ಟಿ, ಮೋಹನ ರಾಮದುರ್ಗ, ಬಸವರಾಜ ರುದ್ರಾಪುರ, ಸಿದ್ದು ಕಲ್ಯಾಣಶೆಟ್ಟಿ, ರಾಕೇಶ ದೊಡಮನಿ, ರೈತರಾದ ಶಿವರುದ್ರಪ್ಪ ತಡಕೋಡ, ಮಾರುತಿ ಕದಂ, ಮಲ್ಲಪ್ಪ ಕಿಲಾರಿ, ವೀರೇಶ ದನದಮನಿ ಇದ್ದರು.