ಸುದ್ದಿ ಸಂಕ್ಷೇಪ
ಹುಬ್ಬಳ್ಳಿ: ಚಲವಾದಿ ಸಮಾಜ ಸಭೆ ಇಂದು
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಚಲವಾದಿ ಮಹಾಸಭಾ ಆಶ್ರಯದಲ್ಲಿ ಆ. 4ರಂದು ಬೆಳಗ್ಗೆ 11ಕ್ಕೆ ನಗರದಲ್ಲಿ ಚಲವಾದಿ ಸಮಾಜದ ಸಭೆ ಕರೆಯಲಾಗಿದೆ. ಜೆ.ಸಿ. ನಗರದ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಸಮಾಜವನ್ನು ಸಂಘಟಿಸುವ ಕುರಿತು ಚರ್ಚಿಸಲಾಗುವುದು. ಸಮಾಜದ ಅಧಿಕಾರಿಗಳು, ನೌಕರರು, ವಕೀಲರು, ವೈದ್ಯರು, ಯುವಕರು, ಮಹಿಳೆಯರು ಪಾಲ್ಗೊಂಡು ಸಲಹೆ ನೀಡುವಂತೆ ಮಹಾಸಭಾದ ಅಧ್ಯಕ್ಷ ಗುರುನಾಥ ಚಲವಾದಿ ಕೋರಿದ್ದಾರೆ.
ಇಂದು ಮೈಸ್ಟೋರಿ
ಹುಬ್ಬಳ್ಳಿ: ದೇಶಪಾಂಡೆ ಫೌಂಡೇಷನ್ ಮತ್ತು ದಿ ಇಂಡಸ್ ಇಂಡಸ್ಟ್ರಿಸ್ ಆಶ್ರಯದಲ್ಲಿ ಆ. 4ರಂದು ರಾತ್ರಿ 7ಕ್ಕೆ ಇಲ್ಲಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಡಿಸ್ನಿ ಯುಟಿವಿ ವ್ಯವಸ್ಥಾಪಕ ನಿರ್ದೇಶಕ ರೋನ್ನಿ ಸ್ಕ್ರ್ಯೂವಾಲಾ ಅವರಿಂದ ಹುಬ್ಬಳ್ಳಿಯ ಯುವ ಉದ್ಯಮಿಗಳಿಗಾಗಿ ಮೈ ಸ್ಟೋರಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ಹೊಸತಾಗಿ ಉದ್ದಿಮೆ ಆರಂಭಿಸುತ್ತಿರುವ ಯುವ ಉದ್ಯಮಿಗಳು ಹೇಗೆ ತಮ್ಮ ಉದ್ದಿಮೆ ವಿಸ್ತರಿಸಿಕೊಳ್ಳಬಹುದು ಎನ್ನುವ ಕುರಿತು ಉಪನ್ಯಾಸದಲ್ಲಿ ಮಾಹಿತಿ ನೀಡಲಾಗುವುದು.
ನಾಳೆ ಧಾರವಾಡಕ್ಕೆ ಸಚಿವ ಸಂತೋಷ ಲಾಡ್ ಭೇಟಿ
ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಆ. 5ರಂದು ಮುಂಜಾನೆ 10.30 ಗಂಟೆಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ ಹುಬ್ಬಳ್ಳಿಗೆ ಆಗಮಿಸಿ ರಾತ್ರಿ 8-5ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ಮರಳುವರು.
ನಾಳೆ ಲೀಡ್‌ಗೆ ಚಾಲನೆ
ಹುಬ್ಬಳ್ಳಿ: ದೇಶಪಾಂಡೆ ಫೌಂಡೇಷನ್‌ನ 6ನೇ ಲೀಡ್ ಕಾರ್ಯಕ್ರಮಕ್ಕೆ ಆ. 5ರಂದು ಬೆಳಗ್ಗೆ 11ಕ್ಕೆ ಇಲ್ಲಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಚಾಲನೆ ನೀಡಲಾಗುವುದು. ಡಿಸ್ನಿ ಯುಟಿವಿ ವ್ಯವಸ್ಥಾಪಕ ನಿರ್ದೇಶಕ ರೋನ್ನಿ ಸ್ಕ್ರ್ಯೂವಾಲಾ, ಗುರುರಾಜ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಐದನೇ ಲೀಡ್ ಪ್ರಾಜೆಕ್ಟ್‌ನಲ್ಲಿ ಸಾಧಿಸಿದ ಹಲವು ಸಂಗತಿಗಳ ಕುರಿತು ಪರಾಮರ್ಶೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
6ರಂದು ಸಚಿವ ಚಿಂಚನಸೂರ ಪ್ರವಾಸ
ಹುಬ್ಬಳ್ಳಿ: ಜವಳಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ ಅವರು ಆ. 6ರಂದು ರಾತ್ರಿ 8ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಆ. 7ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ್ನ 3ಕ್ಕೆ ನಿಗಮದ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ 8ರಂದು ಗುಲ್ಬರ್ಗಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.